Homeದೇಶ-ವಿದೇಶಹುಬ್ಬಳ್ಳಿ - ಧಾರವಾಡ ಬೈಪಾಸ್ ರಸ್ತೆಯನ್ನು ಷಟ್ಪಥ ರಸ್ತೆ ನಿರ್ಮಾಣ ಕುರಿತಂತೆ ದೆಹಲಿಯಲ್ಲಿ ನಿತೀನ್ ಗಡ್ಕರಿ...

ಹುಬ್ಬಳ್ಳಿ – ಧಾರವಾಡ ಬೈಪಾಸ್ ರಸ್ತೆಯನ್ನು ಷಟ್ಪಥ ರಸ್ತೆ ನಿರ್ಮಾಣ ಕುರಿತಂತೆ ದೆಹಲಿಯಲ್ಲಿ ನಿತೀನ್ ಗಡ್ಕರಿ ನೇತೃತ್ವದಲ್ಲಿ ಸಭೆ

ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಬೈಪಾಸ್ ರಸ್ತೆಯನ್ನು ಷಟ್ಪಥ ರಸ್ತೆ ನಿರ್ಮಾಣ ಕುರಿತಂತೆ ನವದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರೊಂದಿಗೆ ಕೇಂದ್ರ  ಸಚಿವ ಪ್ರಹ್ಲಾದ್ ಜೋಶಿ ಸಭೆ ನಡೆಸಿ ಹುಬ್ಬಳ್ಳಿ-ಧಾರವಾಡ ಬೈಪಾಸ್ 30 ಕಿಮಿ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಮಾರ್ಪಡಿಸಲು ಈ ಕೂಡಲೇ ಟೆಂಡರ್ ಕರೆಯುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈಗಾಗಲೇ ಡಿ.ಪಿ.ಆರ್. ತಯಾರಿಸಲಾಗಿದ್ದು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ  ಆರ್.ಓ.ಬಿ. ಮತ್ತು ಆರ್.ಯು.ಬಿ. ನಿರ್ಮಾಣ ಮಾಡಲು ಸೂಚನೆ ನೀಡಿದ್ದು, ನಿರ್ಮಾಣಕ್ಕೆ  33 ಹೆಕ್ಟೇರ್ ಭೂ ಸ್ವಾಧೀನ ಅವಶ್ಯಕವಾಗಿದ್ದು, ಭೂಮಿ ವಶಪಡಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಳೆದ ಜುಲೈ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ ಬೈಪಾಸ್ ರಸ್ತೆಯನ್ನು1200 ಕೋಟಿ ರೂ. ವೆಚ್ಚದಲ್ಲಿ 6 ಪಥದ  ರಸ್ತೆಯನ್ನಾಗಿಸಲು ಪ್ರಸ್ತಾವನೆಯನ್ನು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಕೇಂದ್ರ ಕಛೇರಿಗೆ ಶೀಘ್ರವಾಗಿ ಕಳುಹಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಹ್ಲಾದ್ ಜೋಶಿ ಸೂಚನೆ ನೀಡಿದ್ದರು.

ಈ ಹಿಂದೆ ರಸ್ತೆ ನಿರ್ಮಿಸಿ ನಿರ್ವಹಿಸುತ್ತಿರುವ ನಂದಿ ಹೈವೇ ಇಂಫ್ರ್ಯಾಂಸ್ತ್ರಕ್ಚರ ಕಂಪನಿಯ ಪ್ರತಿನಿಧಿಗಳು ಇಂದಿನ ಸಭೆಯಲ್ಲಿ  ಭಾಗಿಯಾಗಿದ್ದು ಅವರು ಕೂಡಾ ಈ ಯೋಜನೆಗೆ  ಒಪ್ಪಿಗೆ ನೀಡಿದ್ದು, ಸರಿಯಾದ  ಸಹಕಾರ ನೀಡುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ಅನಕೂಲಕ್ಕಾಗಿ  ಸರ್ವಿಸ್ ರಸ್ತೆಯನ್ನು ಎರಡೂ ಕಡೆ ನಿರ್ಮಿಸಲು ಸೂಚನೆ ನೀಡಲಾಗಿದೆ.

ಇಂದಿನ  ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದ ಕಾರ್ಯದರ್ಶಿಗಳು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments