ಸ್ವಘೋಷಿಸಿತ ದೇವಮಾನವ ಕೈಲಾಸ ಎಂಬ ಸ್ವಂತ ರಾಷ್ಟ್ರ ಕಟ್ಟಿರುವುದಾಗಿ ಸುದ್ದಿಯಾಗಿದ್ದು ಇತಿಹಾಸ..! ಈಗ ಹೊಸ ವಿಷ್ಯ ಏನಪ್ಪಾ ಅಂದ್ರೆ ಆತ ಹೊಸದಾದ ರಿಸರ್ವ್ ಬ್ಯಾಂಕ್ ಮತ್ತು ಕರೆನ್ಸಿಯನ್ನು ಪರಿಚಯಿಸಿದ್ದಾನೆ..!
ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಮತ್ತು ಕರೆನ್ಸಿ ಬಿಡುಗಡೆ ಮಾಡೋದಾಗಿ ಹೇಳಿದ್ದ ನಿತ್ಯಾನಂದ ಸ್ವಾಮಿ ತಾನು ಹೇಳಿದಂತೆ ಗಣೇಶ ಚತುರ್ಥಿಯಂದು ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಮತ್ತು ಕರೆನ್ಸಿಯನ್ನು ಬಿಡುಗಡೆ ಮಾಡಿದ್ದಾನೆ. ಈ ಕರೆನ್ಸಿಗೆ ಕೈಲಾಸಿಯನ್ ಡಾಲರ್ ಅಂತ ಹೆಸರಿಡಲಾಗಿದೆ.
ಕೈಲಾಸ ದೇಶದೊಂದಿಗೆ ಈಗಾಗಲೇ ಮತ್ತೊಂದು ದೇಶ ಕೂಡ ಒಪ್ಪಂದ ಮಾಡಿಕೊಂಡಿದೆಯಂತೆ. ಆದರೆ, ಅದು ಯಾವ ದೇಶ ಎಂಬುದನ್ನು ಮಾತ್ರ ನಿತ್ಯಾನಂದ ಇನ್ನೂ ಬಹಿರಂಗಪಡಿಸಿಲ್ಲ. ಈ ಒಪ್ಪಂದ ಪತ್ರ 300 ಪುಟಗಳಷ್ಟಿದ್ದು, ಹಣದ ಚಲಾವಣೆ, ಹಣದ ವಿನಿಮಯ ಮೊದಲಾದ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿ ಬ್ಯಾಂಕ್ ಆಫ್ ಕೈಲಾಸ್ ಕಾರ್ಯನಿರ್ವಹಿಸಲಿದೆ ಎಂದಿದ್ದಾನೆ ನಿತ್ಯಾನಂದ.
ಒಟ್ಟು 2 ಉದ್ದೇಶಗಳಿಗಾಗಿ ಈ ಬ್ಯಾಂಕ್ ಆಫ್ ಕೈಲಾಸ್ ತೆರೆಯಲಾಗುತ್ತಿದ್ದು, ಆರ್ಥಿಕತೆ ಪುನಶ್ಚೇತನದೊಂದಿಗೆ ತಮಗೆ ದೇಣಿಗೆ ನೀಡುರುವವರಿಗಾಗಿ ಈ ಬ್ಯಾಂಕ್ ಸಹಾಯಕವಾಗಿದೆ. ಎಜಿಒ ಮಾದರಿಯಲ್ಲಿ ಇದು ಕರ್ತವ್ಯ ನಿರ್ವಹಿಸಲಿದೆ ಎಂದು ಹೇಳಿಕೊಂಡಿದ್ದಾನೆ.