Saturday, October 1, 2022
Powertv Logo
Homeಕ್ರೀಡೆಕರ್ನಾಟಕದ ‘ಉಸೈನ್ ಬೋಲ್ಟ್‘ ಶ್ರೀನಿವಾಸ್ ಗೌಡರ ದಾಖಲೆ ಮುರಿದ ನಿಶಾಂತ್ ಶೆಟ್ಟಿ!

ಕರ್ನಾಟಕದ ‘ಉಸೈನ್ ಬೋಲ್ಟ್‘ ಶ್ರೀನಿವಾಸ್ ಗೌಡರ ದಾಖಲೆ ಮುರಿದ ನಿಶಾಂತ್ ಶೆಟ್ಟಿ!

ಉಡುಪಿ: ತುಳುನಾಡಿನ ಜನಪದ ಕ್ರೀಡೆ ಕಂಬಳದಲ್ಲಿ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಯಾಗುತ್ತಲೇ ಇದೆ. ಒಬ್ಬರು ಮಾಡಿದ ದಾಖಲೆಯನ್ನು ಇನ್ನೊಬ್ಬರು ಮುರಿಯುತ್ತಿದ್ದಾರೆ. ಫೆಬ್ರವರಿ 1 ರಂದು ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು ದಾಖಲೆ ಬರೆದು ಸುದ್ದಿಯಲ್ಲಿರಬೇಕಾದರೆ, ಅವರ ದಾಖಲೆಯನ್ನು ಮುರಿದು ಇನ್ನೊಬ್ಬ ಕಂಬಳವೀರ ನಿಶಾಂತ್ ಶೆಟ್ಟಿ ಇದೀಗ ಸುದ್ದಿಯಾಗುತ್ತಿದ್ದಾರೆ.

ಶ್ರೀನಿವಾಸ ಗೌಡ ಕೇವಲ 13.62 ಸೆಕೆಂಡ್​ಗಳಲ್ಲಿ 142.50 ಮೀಟರ್ ದೂರ ಕ್ರಮಿಸಿದ್ದು, ಕರ್ನಾಟಕದ ಉಸೈನ್ ಬೋಲ್ಟ್ ಎಂದು ಹೆಸರು ಪಡೆದುಕೊಂಡರು. ಆದರೆ ಈಗ ಕಾರ್ಕಳದ ಬಜಗೊಳಿಯ ನಿಶಾಂತ್ ಶೆಟ್ಟಿ ವೇಣೂರಿನ ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳದಲ್ಲಿ  13.61 ಸೆಕೆಂಡ್​ನಲ್ಲಿ 143 ಮೀಟರ್ ದೂರ ಕ್ರಮಿಸಿದ್ದಾರೆ. ಅಲ್ಲದೆ ಒಂದು ಸೆಕೆಂಡ್​ನ ಅಂತರದಲ್ಲಿ ಶ್ರೀನಿವಾಸ ಗೌಡರು ಮಾಡಿದ ದಾಖಲೆಯನ್ನು ಮುರಿದು ಇವರು ಹೊಸ ದಾಖಲೆಯನ್ನು ಬರೆದಿದ್ದಾರೆ. ನಿಶಾಂತ್ ಶೆಟ್ಟಿ ಶ್ರೀನಿವಾಸ್ ಗೌಡರಿಗಿಂತ 50 ಮೀಟರ್ ಹೆಚ್ಚಿನ ದೂರವನ್ನು 0.01 ಸೆಕೆಂಡ್ ಬೇಗ ಕ್ರಮಿಸಿ ದಾಖಲೆ ಸೃಷ್ಟಿಸಿದ್ದಾರೆ.

ನಿಶಾಂತ್ ಶೆಟ್ಟಿ ಗುರಿ ಮುಟ್ಟಲು ತೆಗೆದುಕೊಂಡ ಕಾಲಾವಕಾಶವನ್ನು 100 ಮೀಟರ್​ಗೆ ತಾಳೆ ಹಾಕಿದಾಗ 9.51 ಸೆಕೆಂಡ್ ಆಗಿತ್ತು. ಶ್ರೀನಿವಾಸ ಗೌಡ ತೆಗೆದುಕೊಂಡ ಸಮಯ 9.52 ಸೆಕೆಂಡ್ ಆಗಿದೆ. 2009 ರಲ್ಲಿ ಉಸೈನ್ ಬೋಲ್ಟ್ 9.58 ಸೆಕೆಂಡ್​ನಲ್ಲಿ 100 ಮೀಟರ್ ದೂರವನ್ನು ಓಡಿ ವಿಶ್ವದಾಖಲೆ ಮಾಡಿದ್ದರು. ಇದರ ಪ್ರಕಾರ ನಿಶಾಂತ್ ಶೆಟ್ಟಿ ಬೋಲ್ಟ್​ಗಿಂತ 0.07 ಸೆಕೆಂಡ್ ವೇಗವಾಗಿ ತಮ್ಮ ಗುರಿಯನ್ನು ತಲುಪಿದ್ದಾರೆ.

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments