ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಇನ್ನಿಲ್ಲ

0
328

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿಕೊಂಡಿದ್ದು, ಹಿರಿಯ ಸಾಹಿತಿ, ಕವಿ ಕೆ. ಎಸ್ ನಿಸಾರ್ ಅಹಮದ್ ಇಂದು ವಿಧಿವಶರಾಗಿದ್ದಾರೆ. 

ಅನಾರೋಗ್ಯದಿಂದ ಬಳಲುತ್ತಿದ್ದ ನಿಸಾರ್ ಅವರು ಇಂದು ಬೆಂಗಳೂರಿನ ತಮ್ಮ ಪದ್ಮನಾಭನಗರ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

ಫೆಬ್ರವರಿ 5, 1936 ರಲ್ಲಿ ಬೆಂಗಳೂರಿನ ದೇವನಹಳ್ಳಿಯಲ್ಲಿ ಜನಿಸಿದ ಇವರು ನಿತ್ಯೋತ್ಸವ ಕವಿ ಎಂದೇ ಪ್ರಖ್ಯಾತರಾಗಿದ್ದರು. 1959 ರಲ್ಲಿ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ತಮ್ಮ 10 ನೇ ವಯಸ್ಸಿಗೆ ಸಾಹಿತ್ಯ ಕೃಷಿ  ಆರಂಭಿಸಿದ್ದರು. ಶಿವಮೊಗ್ಗದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ಅಷ್ಟೇ ಅಲ್ಲದೆ ಹಲವು ಕವನ ಸಂಕಲನಗಳನ್ನು ರಚಿಸಿದ್ದು, ಮನಸ್ಸು ಗಾಂಧಿ ಬಜಾರ್, ಕುರಿಗಳು ಸಾರ್ ಕುರಿಗಳು ಹಾಗೂ ನಿತ್ಯೋತ್ಸವ ಇಂತಹ ಪ್ರಮುಖ ಕವನ ಸಂಕಲನಗಳನ್ನು ರಚಿಸಿದ್ದು, ಪದ್ಮಶ್ರೀ, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಗೊರೂರು ಪ್ರಶಸ್ತಿ, ನಾಡೋಜ್, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

LEAVE A REPLY

Please enter your comment!
Please enter your name here