Saturday, May 21, 2022
Powertv Logo
Homeದೇಶನಿರ್ಭಯಾ ಅತ್ಯಾಚಾರಿಗಳಿಗೆ ನಾಳೆ ಗಲ್ಲು

ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆ ಗಲ್ಲು

ನವದೆಹಲಿ: ಏಳು ವರ್ಷಗಳ ಬಳಿಕ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ನಾಲ್ವರು ಕಾಮಾಂಧರನ್ನು ಗಲ್ಲಿಗೇರಿಸಲು ದಿನಾಂಕ ಮತ್ತು ಸಮಯ ನಿಗದಿ ಕೂಡ ಆಗಿದೆ. ನಾಳೆ ಬೆಳಗ್ಗೆ 6 ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆಯಾಗಲಿದೆ.
2012 ಡಿಸೆಂಬರ್​ನಲ್ಲಿ ನಡೆದ ನಿರ್ಭಯಾ ಅತ್ಯಾಚಾರ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಒಟ್ಟು 6 ಅಪರಾಧಿಗಳಲ್ಲಿ ಅಕ್ಷಯ್ ಠಾಕೂರ್, ಮುಕೇಶ್, ವಿನಯ್ ಮತ್ತು ಪವನ್​ ಎಂಬ ಅಪರಾಧಿಗಳು ಗಲ್ಲಿಗೆ ಗುರಿಯಾಗಿದ್ದಾರೆ. 6 ಮಂದಿಯಲ್ಲಿ ರಾಮ್​ಸಿಂಗ್ ಎಂಬ ಅಪರಾಧಿ 2013ರಲ್ಲಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ, ಇನ್ನೊಬ್ಬ ಅಪರಾಧಿ ಕೃತ್ಯ ನಡೆದಾಗ ಅಪ್ರಾಪ್ತನಾಗಿದ್ದರಿಂದ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾನೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments