ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳಿಗೆ ತಾತ್ಕಾಲಿಕ ಜೀವದಾನ ಸಿಕ್ಕಿದೆ. ಇದೇ ಜನವರಿ 22ರಂದು ಬೆಳಗ್ಗೆ ನಾಲ್ವರೂ ಗಲ್ಲಿಗೇರಬೇಕಾಗಿತ್ತು. ಆದರೆ ಕೆಲವು ಕಾರಣಗಳಿಂದ ಗಲ್ಲುಶಿಕ್ಷೆಯನ್ನು ಮುಂದೂಡಲಾಗುತ್ತಿದೆ ಎಂದು ತಿಳಿದುಬಂದಿದೆ.
ನಿರ್ಭಯಾ ಅಪರಾಧಿಗಳನ್ನು ಜನವರಿ 22 ರಂದು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗುತ್ತಿಲ್ಲ ಎಂದು ತಿಹಾರ್ ಜೈಲಿನ ವಕೀಲ ರಾಹುಲ್ ಮೆಹ್ರಾ ಹೇಳಿದ್ದಾರೆ.
ಸದ್ಯ ಅಪರಾಧಿಗಳ ಪೈಕಿ ಒಬ್ಬ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಿದ್ದು , ಆ ಅರ್ಜಿ ರಾಷ್ಟ್ರಪತಿಗಳ ಮುಂದಿದೆ. ಅದು ಇತ್ಯರ್ಥವಾಗುವವರೆಗೂ ಗಲ್ಲು ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.
“ಕ್ಷಮಾದಾನ ಅರ್ಜಿ ತಿರಸ್ಕೃತವಾದ 14 ದಿನಗಳ ನಂತರವಷ್ಟೇ ಗಲ್ಲು ಶಿಕ್ಷೆ ಜಾರಿಯಾಗಲಿದೆ. ನಾವು ನಿಯಮಗಳನ್ನು ಪಾಲಿಸಬೇಕಾಗಿದೆ. ನಿಯಮದ ಪ್ರಕಾರ ಕ್ಷಮಾದಾನ ಅರ್ಜಿ ತಿರಸ್ಕೃತವಾದ ನಂತರ 14 ದಿನಗಳ ಅಪರಾಧಿಗಳಿಗೆ ನೋಟಿಸ್ ನೀಡಬೇಕು” ಎಂಬುದಾಗಿ ದೆಹಲಿ ಸರ್ಕಾರ ಕೋರ್ಟ್ಗೆ ತಿಳಿಸಿದೆ.
ನಿರ್ಭಯಾ ಅಪರಾಧಿಗಳಲ್ಲಿ ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಪಿಟಿಷನ್ನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿತ್ತು. ಮುಖೇಶ್ ಸಿಂಗ್ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಇದು ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಮಂಗಳವಾರ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದ ಆತ, ‘ಕ್ಷಮಾದಾನ ಅರ್ಜಿಯನ್ನು ಈಗಾಗಲೇ ರಾಷ್ಟ್ರಪತಿಗೆ ಸಲ್ಲಿಸಲಾಗಿದೆ. ಇದು ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ಗಲ್ಲು ಶಿಕ್ಷೆಯನ್ನು ಮುಂದೂಡ ಬೇಕು’ ಎಂದು ಮನವಿ ಮಾಡಿಕೊಂಡಿದ್ದ.
zithromax drug interaction
will zithromax treat a sinus infection