Thursday, October 6, 2022
Powertv Logo
Homeದೇಶಫೆಬ್ರವರಿ 1ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು!

ಫೆಬ್ರವರಿ 1ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು!

ನವದೆಹಲಿ : ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ನಾಲ್ವರು ಕಾಮಾಂಧರನ್ನು ಗಲ್ಲಿಗೇರಿಸಲು ದಿನಾಂಕ ಮತ್ತು ಸಮಯ ನಿಗದಿ ಕೂಡ ಆಗಿದೆ.
ಈ ಹಿಂದೆ ಜನವರಿ 22ಕ್ಕೆ ಗಲ್ಲು ಶಿಕ್ಷೆ ನಿಗದಿಪಡಿಸಲಾಗಿತ್ತು. ನಾಲ್ವರಲ್ಲಿ ಒಬ್ಬನಾದ ಮುಖೇಶ್ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರಿಂದ ಮರಣದಂಡನೆಯನ್ನು ಮುಂದೂಡಲಾಗಿತ್ತು. ಇಂದು ಬೆಳಗ್ಗೆ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. ಇದೀಗ ಪಟಿಯಾಲ ಹೌಸ್​ ಕೋರ್ಟ್ ಹೊಸ ಡೆತ್ ವಾರೆಂಟ್​ ಫಿಕ್ಸ್ ಮಾಡಿದ್ದು, ಅಪರಾಧಿಗಳಾದ ಅಕ್ಷಯ್ ಠಾಕೂರ್, ಮುಕೇಶ್, ವಿನಯ್ ಮತ್ತು ಪವನ್​ ಗಲ್ಲಿಗೇರುವುದು ಪಕ್ಕಾ ಆಗಿದೆ.

ಒಟ್ಟು 6 ಮಂದಿ ಅಪರಾಧಿಗಳಲ್ಲಿ 2013ರಲ್ಲಿ ರಾಮ್​ಸಿಂಗ್ ಎಂಬ ಅಪರಾಧಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ, ಇನ್ನೊಬ್ಬ ಅಪರಾಧಿ ಕೃತ್ಯ ನಡೆದಾಗ ಅಪ್ರಾಪ್ತನಾಗಿದ್ದರಿಂದ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾನೆ.

 

 

5 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments