Friday, October 7, 2022
Powertv Logo
Homeದೇಶನಂಗೇಕೆ ಗಲ್ಲು ಶಿಕ್ಷೆ ಅಂತ ಸುಪ್ರೀಂಕೋರ್ಟನ್ನು ಪ್ರಶ್ನಿಸಿದ ಅತ್ಯಾಚಾರಿ!

ನಂಗೇಕೆ ಗಲ್ಲು ಶಿಕ್ಷೆ ಅಂತ ಸುಪ್ರೀಂಕೋರ್ಟನ್ನು ಪ್ರಶ್ನಿಸಿದ ಅತ್ಯಾಚಾರಿ!

ನವದೆಹಲಿ : ನಂಗೇಕೆ ಗಲ್ಲು ಶಿಕ್ಷೆ ಅಂತ ಅತ್ಯಾಚಾರಿಯೊಬ್ಬ ಸುಪ್ರೀಂಕೋರ್ಟನ್ನು ಪ್ರಶ್ನಿಸಿದ್ದಾನೆ. ಈ ಕಾಮಾಂಧ ಸವಾಲೆಸೆದು ಕೊಟ್ಟ ಕಾರಣ ಕೂಡ ವಿಚಿತ್ರವಾಗಿದೆ. ಈ ಪುಣ್ಯಾತ್ಮನ ಆಯುಷ್ಯಯ ಈಗಾಗ್ಲೇ ಕಮ್ಮಿಯಾಗ್ತಿದೆ ಅಂತೆ. ಹಾಗಾಗಿ ಗಲ್ಲು ಶಿಕ್ಷೆ ವಿಧಿಸ್ಬಾರ್ದಂತೆ.
ಹೌದು ನಿರ್ಭಯಾ ಅತ್ಯಾಚಾರಿ ಅಕ್ಷಯ್ ಎಂಬ ಕಾಮಾಂಧ ಹೀಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾನೆ. `ನನಗೆ ಗಲ್ಲು ಶಿಕ್ಷೆ ವಿಧಿಸೋದು ಯಾಕೆ? ನನ್ನ ಆಯುಷ್ಯ ಈಗಾಗ್ಲೇ ಮತ್ತಷ್ಟು ಕಮ್ಮಿಯಾಗ್ತಿದೆ. ಇಂಥಾ ವಿಷಮ ಪರಿಸ್ಥಿತಿಯಲ್ಲಿ ನಂಗೆ ಗಲ್ಲು ವಿಧಿಸೋದು ನ್ಯಾಯವೇ? ಅಂತ ಸುಪ್ರೀಂಕೋರ್ಟನ್ನು ಪ್ರಶ್ನಿಸಿದ್ದಾನೆ. ವಾಯು ಮಾಲಿನ್ಯದಿಂದ ದೆಹಲಿ ಈಗಾಗ್ಲೇ ಗ್ಯಾಸ್​ ಚೇಂಬರ್​ ಆಗಿದೆ . ಇದರಿಂದಾಗಿ ತಮ್ಮ ಆಯುಷ್ಯ ಈಗಾಗ್ಲೇ ಕಡಿಮೆಯಾಗಿದೆ. ಇಲ್ಲಿ ವಾಸ ಮಾಡುವವರ ಆಯಸ್ಸು ತನ್ನಿಂತಾನೇ ಕಮ್ಮಿಯಾಗ್ತಿದೆ. ಹಾಗಾಗಿ ಗಲ್ಲಿಗೇರಿಸುವುದು ಯಾಕೆಂದು ಸುಪ್ರೀಂಗೆ ಅತ್ಯಾಚಾರಿ ಅಕ್ಷಯ್​ ಕೇಳಿದ್ದಾನೆ. ಅಲ್ಲದೆ ಬಹಿರಂಗ ಕೋರ್ಟಲ್ಲಿ ತನ್ನ ಅರ್ಜಿ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದಾನೆ.

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments