Sunday, June 26, 2022
Powertv Logo
Homeರಾಜ್ಯಬೆಳಗಾವಿಯಲ್ಲಿ ನಿಂಬಾಳ್ಕರ್ ಪಾದಯಾತ್ರೆ; ಸಾಥ್ ನೀಡಿದ ಸಿದ್ದು

ಬೆಳಗಾವಿಯಲ್ಲಿ ನಿಂಬಾಳ್ಕರ್ ಪಾದಯಾತ್ರೆ; ಸಾಥ್ ನೀಡಿದ ಸಿದ್ದು

ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗುವ ಮೊದಲೇ ಅದಕ್ಕೆ ಪ್ರತಿಭಟನೆಗಳ ಬಿಸಿ ತಾಗಿದೆ. ಖಾನಾಪುರ ಅಭಿವೃದ್ಧಿಗೆ ಆಗ್ರಹಿಸಿ ಶಾಸಕಿ ಅಂಜಲಿ ನಿಂಬಾಳ್ಕರ್‌ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಅಧಿವೇಶನ ಶುರುವಾಗಲು 2 ದಿನ ಇರುವಂತೆಯೇ ಪಾದಯಾತ್ರೆಯನ್ನು ಶುರುಮಾಡಿದ್ದ ಅಂಜಲಿ ನಿಂಬಾಳ್ಕರ್ ಖಾನಾಪುರ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದರು. ಹೀಗೆ ನಿಂಬಾಳ್ಕರ್ ಹೋದಲ್ಲೆಲ್ಲ ಜನರು ಅವರ ಜೊತೆಯಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾಗುವ ಮೂಲಕ ಅವರನ್ನು ಬೆಂಬಲಿಸುತ್ತಿದ್ದಾರೆ.

ಅಂಜಲಿ ನಿಂಬಾಳ್ಕರ್ ಪಾದಯಾತ್ರೆಗೆ ಬರಿ ಸಾರ್ವಜನಿಕರಷ್ಟೇ ಅಲ್ಲ, ಮಾಜಿ ಸಿಎಂ. ಸಿದ್ದರಾಮಯ್ಯ ಸಹ ಸಾಥ್ ನೀಡಿದರು. ಆ ಸಮಯದಲ್ಲಿ ಸುವರ್ಣ ಸೌಧದತ್ತ ಬರುತ್ತಿದ್ದ ಸಿದ್ದರಾಮಯ್ಯನವರನ್ನು ಪೊಲೀಸರು ತಡೆದರು. ಆಗ ಪೊಲೀಸರ ಜೊತೆ ಕಾಂಗ್ರೆಸ್ ನಾಯಕರ ಮಾತಿನ ಚಕಮಕಿಯಾಯಿತು. ಸಿದ್ದರಾಮ್ಯನವರಂತು ಕಿಡಿಕಿಡಿಯಾಗಿ ‘ಏನಯ್ಯ ಮ್ಯಾನ್ ಹ್ಯಾಂಡಲ್ ಮಾಡ್ತೀಯ, ಇದನ್ನ ಸದನದಲ್ಲಿ ಚರ್ಚಿಸ್ತೀನಿ’ ಎಂದು ಗುಟುರು ಹಾಕಿದರು. ಸಿದ್ದರಾಮಯ್ಯನವರ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments