Sunday, October 2, 2022
Powertv Logo
Homeಸಿನಿಮಾಬಹುಭಾಷಾ ನಟನ ಜೊತೆ ಎಂಗೇಜ್ ಆದ ನಿಕ್ಕಿ ಗಲ್ರಾನಿ

ಬಹುಭಾಷಾ ನಟನ ಜೊತೆ ಎಂಗೇಜ್ ಆದ ನಿಕ್ಕಿ ಗಲ್ರಾನಿ

ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ, ಪರಭಾಷಾ ಇಂಡಸ್ಟ್ರಿಯಲ್ಲೇ ಸೆಟಲ್ ಆಗಿದ್ದು ಎಲ್ರಿಗೂ ಗೊತ್ತೇಯಿದೆ. ಇದೀಗ ಪರಭಾಷಾ ಸ್ಟಾರ್​ನ ಕೈಹಿಡಿಯೋ ಮೂಲಕ ಪರ್ಮನೆಂಟ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಇಷ್ಟಕ್ಕೂ ಯಾರು ಆ ಸ್ಟಾರ್ ಅನ್ನೋದ್ರ ಜೊತೆ ಅವ್ರ ನಿಶ್ಚಿತಾರ್ಥದ ಸ್ಪೆಷಲ್ ವಿಡಿಯೋ ಝಲಕ್ ತೋರಿಸ್ತೀವಿ. ಕಣ್ತುಂಬಿಕೊಳ್ಳಿ.

2014ರಲ್ಲಿ ಮಲಯಾಳಂ ಇಂಡಸ್ಟ್ರಿಯಲ್ಲಿ ಇಂಟ್ರಡ್ಯೂಸ್ ಆದ್ರೂ, ನಮ್ಮ ಸ್ಯಾಂಡಲ್​ವುಡ್​ನ ಅಜಿತ್ ಹಾಗೂ ಜಂಬೂ ಸವಾರಿ ಸಿನಿಮಾಗಳಿಂದ ಕನ್ನಡ ಪ್ರೇಕ್ಷಕರ ಮನಗೆದ್ದ ಬ್ಯೂಟಿ ಅಂದ್ರೆ ಅದು ನಿಕ್ಕಿ ಗಲ್ರಾನಿ. ಈಕೆ ಬಹುಭಾಷಾ ನಟಿ ಸಂಜನಾ ಗಲ್ರಾನಿಯ ಒಡಹುಟ್ಟಿದ ಸಹೋದರಿಯೂ ಹೌದು.

ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲೇ ಸಿಕ್ಕಾಪಟ್ಟೆ ಬ್ಯುಸಿ ಆದ ನಿಕ್ಕಿ, ಓ ಪ್ರೇಮವೇ ಅನ್ನೋ ಮತ್ತೊಂದು ಕನ್ನಡ ಸಿನಿಮಾದಲ್ಲಿ ಬಹಳ ಗ್ಯಾಪ್​ನ ನಂತ್ರ ಕಾಣಿಸಿಕೊಂಡಿದ್ರು. ತಮಿಳು ಹಾಗೂ ಮಲಯಾಳಂನ ಒಟ್ಟು ಮೂರ್ನಾಲ್ಕು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿರೋ ಈ ಬ್ಯೂಟಿ, ರೀಸೆಂಟ್ ಆಗಿ ಎಂಗೇಜ್​ಮೆಂಟ್ ಮಾಡಿಕೊಳ್ಳೋ ಮೂಲಕ ಹುಡ್ಗರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಹೌದು.. ಈತನ ಹೆಸ್ರು ಆದಿ ಪಿನಿ ಶೆಟ್ಟಿ. ತೆಲುಗು ಮೂಲದ ಡೈರೆಕ್ಟರ್ ಮಗ. ಚೆನ್ನೈನಲ್ಲೇ ಹುಟ್ಟಿ ಬೆಳೆದ್ರೂ, ಸೌತ್​ನ ಬಹುತೇಕ ಎಲ್ಲಾ ಭಾಷೆಯಲ್ಲಿ ತಮ್ಮ ನಟನಾ ಗಮ್ಮತ್ತು ತೋರಿಸಿದ್ದಾರೆ. ಅದ್ರಲ್ಲೂ ಸರೈನೋಡು ಚಿತ್ರದಲ್ಲಿನ ವಿಲನ್ ರೋಲ್ ಎವರ್​ಗ್ರೀನ್. ಅಷ್ಟರ ಮಟ್ಟಿಗೆ ಕಮಾಲ್ ಮಾಡಿದ್ರು ಆದಿ ಪಿನಿಶೆಟ್ಟಿ.

ನಿಕ್ಕಿಗಿಂತ ಹೆಚ್ಚೂ ಕಡಿಮೆ ದಶಕದ ಹಿಂದೆಯೇ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟ ಆದಿ, ಒಳ್ಳೆಯ ನೇಮು, ಫೇಮು ಸಂಪಾದಿಸಿಕೊಂಡಿದ್ದಾರೆ. ಅಂದಹಾಗೆ ನಿಕ್ಕಿ ಜೊತೆ ಬಹಳ ವರ್ಷಗಳಿಂದ ಸ್ನೇಹದಲ್ಲಿದ್ದ ಆದಿ, ಪರಸ್ಪರ ಪ್ರೇಮಾಂಕುರಿಸಿ, ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಉಂಗುರ ಬದಲಿಸಿಕೊಂಡು ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ.

2015ರ ಯಾಗವರಾಯುನುಮ್ ನಾ ಕಾಕ್ಕಾ ಹಾಗೂ 2017ರ ಮರಗದ ನಾನಯಮ್ ಅನ್ನೋ ಎರಡು ಚಿತ್ರಗಳಲ್ಲಿ ಒಟ್ಟಿಗೆ ತೆರೆಹಂಚಿಕೊಂಡಿದ್ರು. ಬಹುಶಃ ಈ ಸಿನಿಮಾಗಳೇ ಇವ್ರನ್ನ ಆನ್​ಸ್ಕ್ರೀನ್ ಟು ಆಫ್​ಸ್ಕ್ರೀನ್ ರಿಲೇಷನ್​ಶಿಪ್​ಗೆ ದೂಡಿವೆ. ಸದ್ಯದಲ್ಲೇ ಇವ್ರು ಅಫಿಶಿಯಲಿ ಮದ್ವೆ ಡೇಟ್​ನ ಅನೌನ್ಸ್ ಮಾಡಲಿದ್ದು, ಸದ್ಯ ಎಂಗೇಜ್ ಆದ ಈ ಕ್ಯೂಟ್ ಜೋಡಿಗೆ ಇಡೀ ಸೌತ್ ದುನಿಯಾ ಶುಭಹಾರೈಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

- Advertisment -

Most Popular

Recent Comments