Home ಸಿನಿ ಪವರ್ ತಂದೆ ಹೆಚ್​ಡಿಕೆ ಹಾದಿಯಲ್ಲಿ ನಿಖಿಲ್​ ಕುಮಾರಸ್ವಾಮಿ | ಇನ್ಮುಂದೆ ನಿಖಿಲ್ ನಟ, ರಾಜಕಾರಣಿ ಮಾತ್ರ ಅಲ್ಲ..!

ತಂದೆ ಹೆಚ್​ಡಿಕೆ ಹಾದಿಯಲ್ಲಿ ನಿಖಿಲ್​ ಕುಮಾರಸ್ವಾಮಿ | ಇನ್ಮುಂದೆ ನಿಖಿಲ್ ನಟ, ರಾಜಕಾರಣಿ ಮಾತ್ರ ಅಲ್ಲ..!

ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಇನ್ಮುಂದೆ ನಟ ಮತ್ತು ರಾಜಕಾರಣಿ ಮಾತ್ರ ಅಲ್ಲ..! ಅವರಿನ್ನು ನಿರ್ಮಾಪಕ ಕೂಡ…! ನಟನೆ, ರಾಜಕಾರಣದ ಜೊತೆಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಕುಮಾರಸ್ವಾಮಿ ರಾಜಕಾರಣದ ಜೊತೆಗೆ  ತಮ್ಮ ಚೆನ್ನಾಂಬಿಕಾ ಫಿಲ್ಮ್ಸ್​​​ ಬ್ಯಾನರ್ ಅಡಿಯಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ರು. ಅವರಂತೆ ನಿಖಿಲ್ ಕೂಡ ಪ್ರೊಡ್ಯೂಸರ್ ಆಗ್ತಿದ್ದಾರೆ.  ಎನ್​ಕೆ ಬ್ಯಾನರ್ ಅನ್ನೋ ತಮ್ಮ ಹೊಸ ಬ್ಯಾನರಡಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ‘ಹಂಬಲ್​ ಪೊಲಿಟಿಷಿಯನ್ ನಾಗರಾಜ್​ ‘ ಸಿನಿಮಾ ಖ್ಯಾತಿಯ ಡೈರೆಕ್ಟರ್ ಸಾದ್ ಖಾನ್ ಆ್ಯಕ್ಷನ್ ಕಟ್ ಹೇಳಲಿರೋ ‘ಸಂಗೀತ್’ ಅನ್ನೋ ಸಿನಿಮಾ ಮಾಡಲಿದ್ದಾರೆ.

ಸದ್ಯ ಸಾದ್​ ಖಾನ್​ ‘ಹಂಬಲ್​​​ ಪೊಲಿಟಿಷಿಯನ್ ನಾಗರಾಜ್​’ ವೆಬ್​ ಸೀರಿಸ್​​​ ಪೋಸ್ಟ್ ಪ್ರೊಡಕ್ಷನ್​​ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಜೊತೆಗೆ `ಸಂಗೀತ್’ ಸಿನಿಮಾ ಸ್ಕ್ರಿಪ್ಟ್​ ವರ್ಕ್​ ಕೂಡ ಮಾಡ್ತಿದ್ದಾರಂತೆ. ಕೊರೋನಾ ಹಾವಳಿ ತಣ್ಣಗಾದರೆ ನವೆಂಬರ್ ನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments