ಬಾಡಿಗೆ ಕಟ್ಟದವ್ರು ಇಷ್ಟೆಲ್ಲಾ ಮಾತಾಡ್ತಾರೆ – ಯಶ್ ವಿರುದ್ಧ ನಿಖಿಲ್ ವಾಗ್ದಾಳಿ..!

0
68

ಮಂಡ್ಯ : ಸಿಎಂ ಕುಮಾರಸ್ವಾಮಿ ಅವರ ಪುತ್ರ, ಮಂಡ್ಯ ರಣಕಣದ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ರಾಕಿಂಗ್​ ಸ್ಟಾರ್​ ಯಶ್ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಪ್ರಚಾರದ ವೇಳೆಯಲ್ಲಿ ಮಾತನಾಡಿದ ನಿಖಿಲ್​. ಜನ್ರಿಗೆ ಒಂದ್ ಮಾತು ಹೇಳಲು ಇಷ್ಟಪಡ್ತೀನಿ. ನಮ್ ತಾತ ದೇವೇಗೌಡ್ರು ಪ್ರಧಾನಿಯಾಗಿದ್ದಾಗ ನಾವು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ 5 ಸಾವಿರ ರೂ ಬಾಡಿಗೆ ಮನೆಯಲ್ಲಿದ್ವಿ. ಆದ್ರೆ, ಇವತ್ತು ಬಾಡಿಗೆ ಕಟ್ಟದವ್ರು, ಬಾಡಿಗೆ ಕೊಡದೇ ಇಷ್ಟೆಲ್ಲಾ ಮಾತಾಡ್ತಾರೆ ಎಂದು ಯಶ್ ವಿರುದ್ಧ ಹರಿಹಾಯ್ದರು. ನೀವು ನನ್ನ ತಂದೆ-ತಾತಗೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರ, ನಂಗೂ ಕೊಡ್ತೀರ ಅಂತ ಬಂದಿದ್ದೇನೆ ಎಂದು ಜನತೆಯಲ್ಲಿ ಮತಾ ಹಾಕುವಂತೆ ಮನವಿ ಮಾಡಿದ್ರು.

LEAVE A REPLY

Please enter your comment!
Please enter your name here