Home ರಾಜ್ಯ ರಾಜಕೀಯಕ್ಕೆ ನಿಖಿಲ್ ಗುಡ್ ಬೈ!; ಸ್ಯಾಂಡಲ್ ವುಡ್ ಯುವರಾಜನ ಮುಂದಿನ ನಡೆ ಏನು?

ರಾಜಕೀಯಕ್ಕೆ ನಿಖಿಲ್ ಗುಡ್ ಬೈ!; ಸ್ಯಾಂಡಲ್ ವುಡ್ ಯುವರಾಜನ ಮುಂದಿನ ನಡೆ ಏನು?

ಮಂಡ್ಯ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಗುಡ್ ಬೈ ಹೇಳಿದ್ರ? ಹೀಗೊಂದು ಪ್ರಶ್ನೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏಕಾಏಕಿ ನಿಖಿಲ್ ತಮ್ಮ ಟ್ವಿಟರ್ ಪ್ರೊಫೈಲ್ ಬದಲಾಯಿಸಿರೋದು ಇದಕ್ಕೆ ಪುಷ್ಠಿ ನೀಡುವಂತಿದೆ.
ಹೌದು, ನಿನ್ನೆ-ಮೊನ್ನೆಯಷ್ಟೇ ಸಾಮಾಜಿಕ ಜಾಲ ತಾಣದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ತಮ್ಮದೇ ಪಕ್ಷದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು. ಮೊದಲೇ ಮಂಡ್ಯ ಲೋಕಸಭಾ ಚುನಾವಣೆ ಸೋಲಿನಿಂದ ನೊಂದಿದ್ದ ನಿಖಿಲ್, ತಮ್ಮದೇ ಪಕ್ಷದ ಕಾರ್ಯಕರ್ತರ ಆಕ್ರೋಶದಿಂದ ಮತ್ತಷ್ಟು ನೊಂದಿದ್ದಾರೆ.  ಕಾರ್ಯಕರ್ತರು, ಅಭಿಮಾನಿಗಳ ಆಕ್ರೋಶಭರಿತ ಹೇಳಿಕೆಯಿಂದ ತಮ್ಮ ಮನಸ್ಸು ಬದಲಿಸಿರುವ ನಿಖಿಲ್ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿದಂತಿದೆ.
ಏಕಾಏಕಿ ಬದಲಾದ ನಿಖಿಲ್ ಟ್ವಿಟರ್ ಪ್ರೊಫೈಲ್
ಈ ಹಿಂದೆ ನಿಖಿಲ್ ಅವರ ಟ್ವಿಟರ್ ಪ್ರೊಫೈಲ್ ನಲ್ಲಿ ಆಕ್ಟರ್ ಹಾಗೂ ಜೆಡಿಎಸ್ ಯೂಥ್ ಪ್ರೆಸಿಡೆಂಟ್ ಅಂತಾ ಬರೆದುಕೊಂಡಿದ್ದರು. ನಿನ್ನೆ ಮತ್ತು ಮೊನ್ನೆಯ ಘಟನೆಯ ಮನಸ್ಸು ಬದಲಿಸಿರುವ ನಿಖಿಲ್ ಜೆಡಿಎಸ್ ಯೂಥ್ ಪ್ರೆಸಿಡೆಂಟ್ ಅನ್ನೋ ಬರಹವನ್ನ ತೆಗೆದು, ಅದರ ಬದಲಿಗೆ ಉತ್ಸಾಹಿ ಕೃಷಿಕ ಅಂತಾ ಬರೆದುಕೊಂಡಿದ್ದಾರೆ.
ನಿಖಿಲ್ ಈ ನಿರ್ಧಾರಕ್ಕೆ ಕಾರಣ ಏನು?:
ಶುಕ್ರವಾರ ನಿರ್ಮಾಪಕ ಮುನಿರತ್ನ ಅವರು ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಮುನಿರತ್ನ ಅವರ ಜೊತೆ ಇರುವ ಫೋಟೋದೊಂದಿಗೆ ಶುಭಾಶಯ ಕೋರಿದ್ದರು.
ಇದರಿಂದ ಅಸಮಾಧಾನಗೊಂಡಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು, ನಿಖಿಲ್ ಅವರನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ನಾವು ಕುಮಾರಣ್ಣ ಅವರನ್ನ ಸ್ವಂತ ಸಹೋದರನಿಗಿಂತ ಹೆಚ್ಚಾಗಿ ಪ್ರೀತಿ ಮಾಡ್ತೀವಿ. ನಮಗೆ ಜೆಡಿಎಸ್ ಪಕ್ಷ ಬಿಟ್ಟರೆ ಬೇರೆ ಯಾವುದೂ ಒಗ್ಗಲ್ಲ. ನಾವು ಪಕ್ಷದ ನಿಷ್ಟಾವಂತ ಕಾರ್ಯಕರ್ತರು. ನಮ್ಮ ಕುಮಾರಣ್ಣನ್ನ ಸಿಎಂ ಗಾದಿಯಿಂದ ಕೆಳಗಿಳಿಸಿದವರಲ್ಲಿ ಮುನಿರತ್ನ ಕೂಡ ಪ್ರಮುಖರು. ಇಂತಹ ವಿಶ್ವಾಸ ದ್ರೋಹಿಗಳ ಸಂಬಂಧವೇ ನಿಮಗೆ ಮುಖ್ಯ ಆಯ್ತ? ನೀವು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ. ನೀವು ಅಧ್ಯಕ್ಷರಾದ ನಂತರ ಎಷ್ಟು ಕಡೆ ಪ್ರವಾಸ ಮಾಡಿದ್ದೀರಿ. ನಿಮಗೆ ಸಿನಿಮಾವೇ ಮುಖ್ಯವಾದರೆ ರಾಜಕೀಯ ಬಿಟ್ಟು ಸಿನಿಮಾ ಮಾಡಿಕೊಂಡೇ ಮುಂದುವರಿಯಿರಿ ಅಂತೆಲ್ಲಾ ಆಕ್ರೋಶ ಹೊರ ಹಾಕಿದ್ರು.
ಈ ಎಲ್ಲದರಿಂದ ಮನನೊಂದ ನಿಖಿಲ್ ಜೆಡಿಎಸ್ ಯೂಥ್ ಪ್ರೆಸಿಡೆಂಟ್ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನ ಮಾಡಿದ್ದಾರೆ. ಅಲ್ಲದೇ ರಾಜಕೀಯ ಕ್ಷೇತ್ರವನ್ನೇ ಬಿಟ್ಟು ಸಿನಿಮಾ ಕ್ಷೇತ್ರದಲ್ಲೇ ಮುಂದುವರಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.
ನಿಖಿಲ್ ಚಿತ್ತ, ಕೃಷಿ ಕ್ಷೇತ್ರದತ್ತ:
ಇನ್ನು ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಬಳಿಕ ರಾಜಕಾರಣದಿಂದ, ಅದರಲ್ಲೂ ಪಕ್ಷ ಸಂಘಟನೆಯಿಂದಲೂ ವಿಮುಖರಾಗಿದ್ದರು.
ಮದುವೆ ಆದ ಬಳಿಕವಂತೂ ತಮ್ಮ ತಂದೆ ಕುಮಾರಸ್ವಾಮಿ ಅವರ ಪ್ರೀತಿಯ ಕೇತೋಗಾನಹಳ್ಳಿ ಬಳಿಯ ತೋಟದ ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಜೊತೆಗೆ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ನಿಖಿಲ್, ಕೃಷಿಕನಾಗುವ ಉತ್ಸಾಹದಲ್ಲಿದ್ದಾರೆ.
ಹೀಗಾಗಿ ತಮ್ಮ ಸೋಲು, ಕಾರ್ಯಕರ್ತರು, ಅಭಿಮಾನಿಗಳ ವಿರೋಧ ಕಟ್ಟಿಕೊಳ್ಳುವುದಕ್ಕಿಂತ ಸಿನಿಮಾ ಮತ್ತು ಕೃಷಿ ಕ್ಷೇತ್ರದಲ್ಲೇ ಮುಂದುವರಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.
….
ಡಿ.ಶಶಿಕುಮಾರ್, ಮಂಡ್ಯ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments