Home ಸಿನಿ ಪವರ್ ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್​​ಗೆ ಅಸ್ತು..!

ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್​​ಗೆ ಅಸ್ತು..!

ಬೆಂಗಳೂರು: ವೈರಲ್ ಆಗಿದ್ದ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಡಯಲಾಗ್​ ಫೇಮಸ್​ ಆಗಿ ಇದೇ ಟೈಟಲ್​ನಲ್ಲಿ ಮೂವಿ ಮಾಡೋ ವಿಚಾರ ಬಂದಾಗ ಟೈಟಲ್​ಗೆ ಹೆಚ್ಚಿನ ಡಿಮ್ಯಾಂಡ್ ವ್ಯಕ್ತವಾಗಿತ್ತು. ಟೈಟಲ್​ ರಿಜಿಸ್ಟರ್ ಮಾಡಿಸಿಕೊಳ್ಳಲು ಪೈಪೋಟಿ ಜೋರಾಗಿಯೇ ಇತ್ತು. ಕೊನೆಗೂ ಬಹುಬೇಡಿಕೆಯ ಈ ಟೈಟಲ್​ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿದೆ.

ಟೈಟಲ್ ಯಾರಿಗೆ ಸಿಗುತ್ತೆ ಅನ್ನೋ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲವಿತ್ತು. ಹಾಗೇ ಚಿತ್ರದ ಹೀರೋ, ನಿರ್ಮಾಣ, ನಿರ್ದೇಶಕರ ಬಗ್ಗೆಯೂ ಕುತೂಹಲವಿತ್ತು. ಈಗ ಎಲ್ಲ ಕುತೂಹಲಗಳಿಗೂ ಉತ್ತರ ಸಿಕ್ಕಿದೆ. ಚಿತ್ರ ನಿರ್ದೇಶಕ, ನಿರ್ಮಾಪಕ ಕೃಷ್ಣೇಗೌಡ ಅವರು ನಿಖಿಲ್​ ಎಲ್ಲಿದ್ದೀಯಪ್ಪಾ ಅನ್ನೋ ಟೈಟಲ್​ ರಿಜಿಸ್ಟರ್​ ಮಾಡಿಸಿಕೊಂಡಿದ್ದಾರೆ. ಹಾಗೆಯೇ ಚಿತ್ರತಂಡ ಚಿತ್ರದ ಪೋಸ್ಟರ್ ಕೂಡ ರಿಲೀಸ್​ ಮಾಡಿದೆ. ಆರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಟೈಟಲ್​ಗೆ​​ ಆಕ್ಷೇಪ ವ್ಯಕ್ತಪಡಿಸಿತ್ತು.

ಜಾಗ್ವಾರ್ ಸಿನಿಮಾ ಬಿಡುಗಡೆ ಸಂದರ್ಭ ಕುಮಾರಸ್ವಾಮಿಯವರು ಹೇಳಿದ ಒಂದು ಡಯಲಾಗ್​ ಲೋಕಸಭಾ ಚುನಾವಣೆ ಸಂದರ್ಭ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ನಿಖಿಲ್ ಟ್ರೋಲ್​ಗೊಳಗಾಗಿದ್ದರು. ಸಖತ್ ಫೇಮಸ್​ ಆದ ಡಯಲಾಗ್​​, ಸಿನಿಮಾ ಟೈಟಲ್​ ರೂಪದಲ್ಲಿ ಬೇಡಿಕೆ ಪಡೆದುಕೊಂಡಿತ್ತು.

ಸಚಿವ ಸಿ. ಎಸ್​. ಪುಟ್ಟರಾಜು ತಾವೇ ಸಿನಿಮಾ ಮಾಡ್ತೀವಿ, ನಿಖಿಲ್ ಹೀರೋ ಅಂತ ಮಂಡ್ಯದಲ್ಲಿ ಬಹಿರಂಗವಾಗಿ ಹೇಳಿದ್ದರು. ಇದಕ್ಕೆ ನಿಖಿಲ್​ ಕೂಡಾ ಒಪ್ಪಿಗೆ ಸೂಚಿಸಿದ್ರು. ಆದ್ರೆ ಕೃಷ್ಣೇಗೌಡ ಅವರು ಟೈಟಲ್ ರಿಜಿಸ್ಟರ್​ ಮಾಡಿಸಿಕೊಂಡಿದ್ದಾರೆ. ‘ಎಲ್ಲಿದ್ದೀಯಪ್ಪಾ’ ಅನ್ನೋ ಟೈಟಲ್​​​​ನ್ನು ಹಿರಿಯ ನಿರ್ಮಾಪಕ ಎ. ಗಣೇಶ್ ಕೆಲವು ತಿಂಗಳ ಹಿಂದೆಯೇ ರಿಜಿಸ್ಟರ್ ಮಾಡಿಸಿಕೊಂಡಿದ್ದು ಟೈಟಲ್ ಲಾಂಚ್ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments