Home ಸಿನಿ ಪವರ್ ಅಭಿಷೇಕ್​ ಬಗ್ಗೆ ನಿಖಿಲ್​ ಹೀಗಂತ ಪೋಸ್ಟ್ ಮಾಡಿದ್ರಾ..!?

ಅಭಿಷೇಕ್​ ಬಗ್ಗೆ ನಿಖಿಲ್​ ಹೀಗಂತ ಪೋಸ್ಟ್ ಮಾಡಿದ್ರಾ..!?

ಅಭಿಷೇಕ್ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಆತ್ಮೀಯ ಗೆಳೆಯರು ಅನ್ನೋ ವಿಷ್ಯ ಗೊತ್ತೇ ಇದೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಅಭಿಷೇಕ್ ಅವರ ತಾಯಿ ಸುಮಲತಾ ಲೋಕಸಮರದಲ್ಲಿ ಪರಸ್ಪರ ಸೆಣೆಸಿದ್ದರಿಂದ ಸಹಜವಾಗಿ ಅಭಿ ಮತ್ತು ನಿಖಿಲ್ ದೂರವಾಗಿದ್ರು. ಈಗ ಫಲಿತಾಂಶ ಬಂದಿದ್ದು, ಸುಮಲತಾ ಗೆದ್ದಾಗಿದೆ. ಹೀಗಾಗಿ ಇನ್ನು ಅದೇ ಜಿದ್ದು ಬೇಡ, ಇಬ್ಬರ ಸ್ನೇಹ ಉಳಿಸಿಕೊಳ್ಳೋಣ ಅಂತ ನಿಖಿಲ್-ಅಭಿ ಮನಸ್ಸು ಮಾಡಿದ್ದಾರೆ.
ನಾಳೆ ಅಭಿಷೇಕ್ ಅವರ ಚೊಚ್ಚಲ ಸಿನಿಮಾ ‘ಅಮರ್’ ರಿಲೀಸ್ ಆಗ್ತಾ ಇದೆ. ಅದಕ್ಕಾಗಿ ನಿಖಿಲ್ ಇನ್​ಸ್ಟಾಗ್ರಾಮ್​ನಲ್ಲಿ ಅಭಿಗೆ ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ.
‘ನಾಳೆ ನನ್ನ ಸಹೋದರ ಅಭಿ ಅಭಿನಯದ ಸಿನಿಮಾ ಬಿಡುಗಡೆ ಆಗ್ತಾ ಇದೆ. ಆ ಸಿನಿಮಾಕ್ಕೆ ದೊಡ್ಡ ಯಶಸ್ಸು ಸಿಗ್ಲಿ. ಅಭಿ ಖಂಡಿತಾ ಬಹಳ ಚೆನ್ನಾಗಿ ಅಭಿನಯಿಸಿರ್ತಾನೆ ಅನ್ನೋ ನಂಬಿಕೆ ಇದೆ. ಎಲ್ರೂ ಥಿಯೇಟರ್​ಗಳಿಗೆ ಹೋಗಿ ಸಿನಿಮಾ ನೋಡಿ’ ಅಂತ ನಿಖಿಲ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮಂಡ್ಯದಲ್ಲಿ ತಮ್ಮ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರ ಪೋಸ್ಟ್​​​​​​​ಗೆ ಪ್ರತಿಕ್ರಿಯಿಸಿರೋ ಅಭಿಷೇಕ್, ”ನಿನ್ನ ಬೆಂಬಲಕ್ಕೆ ಧನ್ಯವಾದ. ನಿಂಗೂ ಗೊತ್ತು ಫಸ್ಟ್ ಸಿನಿಮಾ ಅಂದ್ರೆ ಎಷ್ಟೆಲ್ಲಾ ಒತ್ತಡ, ಆತಂಕ ಇರುತ್ತೆ ಅಂತ. ಗೆಳೆಯನಾಗಿ ನಿನ್ನ ಪದಗಳು ಕನ್ನಡ ಸಿನಿರಂಗದಲ್ಲಿನ ಐಕ್ಯತೆ ಮತ್ತು ಪ್ರೀತಿಯ ಪ್ರತೀಕವಾಗಿದೆ. ನಾವಿಬ್ರು ಒಟ್ಟಾಗಿ ಕನ್ನಡ ಚಿತ್ರರಂಗದಲ್ಲಿ ಮುಂದೆ ಸಾಗೋಣ. ನಿನ್ನ ಗೆಲುವಿಗೆ ಯಾವಾಗ್ಲೂ ನಾನು ಶುಭಕೋರ್ತೀನಿ, ನೀನು ನಿರಾಶನಾಗ್ಬೇಡ. ಎಲ್ಲಾ ಸರಿಹೋಗುತ್ತೆ. ಜೀವನದಲ್ಲಿ ಇವೆಲ್ಲಾ ಒಂದು ಭಾಗವಷ್ಟೇ. ರಾಜಕೀಯ ಬದಿಗಿಟ್ಟು ಮಂಡ್ಯ ಏಳ್ಗೆಗೆ ಒಟ್ಟಾಗಿ ಸೇರಿ ಶ್ರಮಿಸೋಣ” ಅಂದಿದ್ದಾರೆ.
ಇನ್ನು ನಿನ್ನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಿಖಿಲ್ ಅಂಬರೀಶ್ ಅವರನ್ನು ಸ್ಮರಿಸಿ ಪೋಸ್ಟ್​ ಒಂದನ್ನು ಮಾಡಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments