Home ರಾಜ್ಯ ಬೆಂಗಳೂರು ನೈಟ್ ಕರ್ಪ್ಯೂ ಜಾರಿ ಮಾಡುವುದಿಲ್ಲ: ಸಿಎಂ ಯಡಿಯೂರಪ್ಪ

ನೈಟ್ ಕರ್ಪ್ಯೂ ಜಾರಿ ಮಾಡುವುದಿಲ್ಲ: ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೋನಾ ಹೊಸ ರೂಪಾಂತರ ಪಡೆದಿರುವುದು ರಾಜ್ಯ ಸರ್ಕಾರಕ್ಕೆ ಸವಾಲಾಗುವ ಲಕ್ಷಣಗಳು ‌ಕಾಣಿಸುತ್ತಿದೆ. ಹೊಸ ವರ್ಷದ ಮೊಜು ಮಸ್ತಿಗೆ ಬ್ರೇಕ್ ಹಾಕಿರುವ ಸರ್ಕಾರ, ನೈಟ್ ಕರ್ಪ್ಯೂ ಜಾರಿ ಮಾಡಬೇಕಾ ಅಥವಾ ಬೇಡ ಅನ್ನುವ ಗೊಂದಲ್ಲಿದೆ.

ಡ್ರ್ಯಾಗನ್​ ರಾಷ್ಟ್ರ ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಸೋಂಕು ಇಡೀ ದೇಶಕ್ಕೆ ರಕ್ತ ಬೀಜಾಸುರನಂತೆ ಹಬ್ಬಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಸಿದೆ. ಕೊರೋನಾ ಎಂಟ್ರಿ ಕೊಟ್ಟು ಒಂದು ವರ್ಷವಾದರೂ ಜನರಲ್ಲಿ ಸೋಂಕಿನ ಭಯ ಕಮ್ಮಿ ಆಗಿಲ್ಲ. ಹೀಗಿರುವಾಗ  ಹೊಸ ಪ್ರಭೇದದ ಕೊರೋನಾ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಬ್ರಿಟನ್ ದೇಶದಲ್ಲಿ ಕಾಣಿಸಿಕೊಂಡ ಹೊಸ ಪ್ರಭೇದ ದೇಶದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಇನ್ನೂ ಭಾರತದಲ್ಲಿ ಕೂಡ ಈ ಹೊಸ ರೂಪಾಂತರ ಕಾಣಿಸಿಕೊಂಡಿದ್ದು, ರಾಜ್ಯ ಸರ್ಕಾರಗಳು ಎಚ್ಚರಿಕೆ ವಹಿಸಿ ಅಂತ ಕೇಂದ್ರ ಸರ್ಕಾರ ಹೈಅಲರ್ಟ್ ಕೊಟ್ಟಿದೆ. ಹೀಗಾಗಿ ಹೊರ ದೇಶದಿಂದ ರಾಜ್ಯಕ್ಕೆ ಬಂದ ಪ್ರಯಾಣಿಕರ‌ ಮೇಲೆ ನೀಗಾವಹಿಸಲಾಗಿದೆ. ಆದರೆ ಸರ್ಕಾರಕ್ಕೆ ‌ಸವಾಲಾಗಿರುವುದು ಹೊಸ ವರ್ಷದ ಆಚರಣೆ.

ಕೊರೋನಾ ಹೊಸ ರೂಪಾಂತರ ವಿಚಾರದ ಬಗ್ಗೆ ರಾಜ್ಯ ಸರ್ಕಾರದಲ್ಲೇ ಗೊಂದಲ ಮೂಡಿದೆ. ನ್ಯೂ ‌ಇಯರ್ ಸೆಲೆಬ್ರೆಷನ್​ಗೆ ಬ್ರೇಕ್ ಹಾಕಿದ್ದು, ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ. ಮುಂಜಾಗ್ರತಾ ದೃಷ್ಟಿಯಿಂದ  ನೈಟ್ ಕರ್ಪ್ಯೂ ವಿಧಿಸುವ ಬಗ್ಗೆ  ಆರೊಗ್ಯ ಸಚಿವ ಸುಧಾಕರ್ ಮುನ್ಸೂಚನೆ ನೀಡಿದ್ದಾರೆ. ಜನರ ಆರೋಗ್ಯವೇ ನಮಗೆ ಮುಖ್ಯ, ಅವರ ರಕ್ಷಣೆಗಾಗಿ ನೈಟ್ ಕರ್ಪ್ಯೂ ಜಾರಿಗೆ ತರುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸುಧಾಕರ್ ಹೇಳಿದ್ದಾರೆ.

ಇನ್ನೂ  ಕೊರೋನಾ ರೂಪಾಂತರದ ಬಗ್ಗೆ ಸಿಎಂ ಯಡಿಯೂರಪ್ಪ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹೊಸ ಪ್ರಭೇದ ದೇಶದಲ್ಲಿ ಸವಾಲಾಗಿದೆ. ನಾವು ಸಾಕಷ್ಟ ಕಟ್ಟೆಚ್ಚರ ಮತ್ತು ಮುಂಜಾಗ್ರತೆ ವಹಿಸಿದ್ದೇವೆ. ಯಾರೇ ಹೊರಗಡೆಯಿಂದ ಬಂದರೂ ವಿಮಾನ ನಿಲ್ದಾಣದಲ್ಲಿ ನೋಡಿ ಪರಿಶೀಲಿಸಿ ತಪಾಸಣೆ ಮಾಡುತ್ತಿದ್ದೇವೆ. ಪ್ರಧಾನಿಗಳು ಕೂಡಾ ಆತಂಕಕ್ಕೊಳಗಾಗಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ವೈರಸ್ ಹರಡದಂತೆ ಎಚ್ಚರಿಕೆ ವಹಿಸುತ್ತೇವೆ. ಈಗಾಗಲೇ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ನೈಟ್ ಕರ್ಪ್ಯೂ ಯಾವುದೇ ಕಾರಣಕ್ಕೂ ಜಾರಿ ಮಾಡುವುದಿಲ್ಲ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

 ಒಟ್ಟಿನಲ್ಲಿ ಈ ಇಬ್ಬರು ನಾಯಕರ ದ್ವಂದ್ವ ಹೇಳಿಕೆಗಳು ಜನರಲ್ಲಿ ಗೊಂದಲ ಮೂಡಿಸಿವೆ. ಈ ಹೊಸ ಕೊರೋನಾ ಬಗ್ಗೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ಸಿಎಂ ಯಡಿಯೂರಪ್ಪ ಜೊತೆ ಆರೋಗ್ಯ ಸಚಿವರು ಮೀಟಿಂಗ್ ಮಾಡಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಕಾದುನೋಡಬೇಕು.

LEAVE A REPLY

Please enter your comment!
Please enter your name here

- Advertisment -

Most Popular

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

‘ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ’

ಕಲಬುರಗಿ: ಕಲಬುರಗಿಯಲ್ಲಿ ನಗರದ ಜಿಮ್ಸ್ ಕಾಲೇಜಿನಲ್ಲಿ ಸಂಸದ ಉಮೇಶ್ ಜಾಧವ್ ಕೊವಿಡ್ ವ್ಯಾಕ್ಸಿನ್ ಗೆ ಚಾಲನೆ ನೀಡಿದರು. ಜಿಲ್ಲೆಯ 8 ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗೆ ಚಾಲನೆ ನೀಡಲಾಯಿತು. ಒಂದು ಕೇಂದ್ರದಲ್ಲಿ 100...

‘ಡಿ ಗ್ರೂಪ್‌ ನೌಕರ ಚಂದ್ರಶೇಖರ್‌ಗೆ ಮೊದಲ ಲಸಿಕೆ ವಿತರಣೆ’

ಬೆಂಗಳೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನಾಗೆ ಲಸಿಕೆ ನೀಡಿ  ಹೂ ಗುಚ್ಛ ನೀಡಿ ಅಭಿನಂದಿಸಿದರು. ಜೊತೆ ಆರೋಗ್ಯ...

‘ಲಸಿಕೆ ವಿತರಣೆಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ’

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಕೊವಿಡ್ ಲಸಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಅತಿ ಕಡಿಮೆ ದಿನದಲ್ಲಿ ಮಹಾಮಾರಿ ಕೊರೋನಾ ಗೆ ವಿಜ್ಞಾನಿಗಳು ಎರಡು ಲಸಿಕೆಯನ್ನು ಸಿದ್ಧ ಪಡಿಸಿದ್ದಾರೆ....

Recent Comments