Home ರಾಜ್ಯ ‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ 1 ರಿಂದ 3 ಲಕ್ಷದ ವರೆಗೆ ಖರ್ಚಾಗುತ್ತಿದೆ. ಈ ಖಾಯಿಲೆಗೆ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿ ಪರಿಣಮಿಸಿದೆ.

ಕೊವಿಡ್ ಗುಣಮುಖರಾದ ಮಕ್ಕಳಿಗೆ ಬಂತು ಮಿಸ್ಸಿ ರೋಗ. ಲಕ್ಷ ಲಕ್ಷ ಹಣ ಹೊಂದಿಸಲಾಗದೆ ಬಡ ಪಾಲಕರ ಗೋಳಾಟ ಹೇಳತಿರಲಾಗಿದೆ. ಕೊರೋನಾ ಹಾಗೂ ಕರಿಮಾರಿಯ ಅಟ್ಟಹಾಸಕ್ಕೆ ನಲುಗಿ ಹೋಗಿರೋ ವಿಜಯಪುರ ಜಿಲ್ಲೆಯಲ್ಲೀಗ ಮಿಸ್ಸಿ ರೋಗ ಲಗ್ಗೆ ಇಟ್ಟಿದೆ. ರೋಗಕ್ಕೆ 20 ಮಕ್ಕಳು ವಿಜಯಪುರದ ಡಾ. ಬಿದರಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್‌ನಿಂದ ಗುಣಮುಖರಾದ 18 ವರ್ಷದೊಳಗಿನ ಮಕ್ಕಳಲ್ಲಿ ಮಿಸ್ಸಿ ಮಾರಿ ಕಾಣಿಸಿಕೊಂಡಿದೆ. ಕೊರೋನಾದಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರೋ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ.

ಪದೇ ಪದೆ ಜ್ವರ ಬರೋದು, ಕಣ್ಣು ಕೆಂಪಾಗುವುದು, ಕತ್ತಿನ ಭಾಗದಲ್ಲಿ ಗಂಟಾಗುವುದು ಮಿಸ್ಸಿ ರೋಗದ ಲಕ್ಷಣಗಳಾಗಿವೆ.

ಮಕ್ಕಳಲ್ಲಿ ಕೊರೋನಾ ಬಂದ ಬಳಿಕ ಮೂರರಿಂದ 6 ವಾರಗಳಲ್ಲಿ ಮಹಾಮಾರಿ ಕಾಣಿಸಿಕೊಳ್ತಿದ್ದು, ಆರಂಭದಲ್ಲೇ 20 ಮಕ್ಕಳನ್ನು ಗುರುತಿಸಿ IVIG ಅನ್ನೋ ಇಂಜೆಕ್ಷನ್ ನೀಡ್ತಿದ್ದಾರೆ. ಇದೇ ಲಕ್ಷಣಗಳುಳ್ಳ 17 ನವಜಾತ ಶಿಶುಗಳಿಗೂ ಚಿಕಿತ್ಸೆ ನೀಡುತ್ತಿದ್ದು, ಅದರಲ್ಲಿ ಒಂದು ನವಜಾತ ಶಿಶು ರೋಗದಿಂದ ಸಾವನ್ನಪ್ಪಿದೆ. ಈ ಇಂಜೆಕ್ಷನ್ ಬೆಲೆ ದುಬಾರಿಯಾಗಿದ್ದು, ಪೋಷಕರು ಮಕ್ಕಳಿಗೆ ಚುಚ್ಚುಮದ್ದು ಕೊಡಿಸಲು ಹೆಣಗಾಡುತ್ತಿದ್ದಾರೆ. ಒಂದು ಮಗು ಮಿಸ್ಸಿ ರೋಗದಿಂದ ಗುಣಮುಖವಾಗಲು 1 ರಿಂದ 3 ಲಕ್ಷ ಹಣ ಬೇಕಾಗಿದ್ದು ಹೆತ್ತವರು ಚಿಕಿತ್ಸೆಯ ಹಣ ಭರಿಸಲಾಗದೇ ಪರದಾಡ್ತಿದ್ದಾರೆ. ಹೀಗಾಗಿ ಸರ್ಕಾರ ವಿಶೇಷ ಯೋಜನೆಯಡಿ ಮಿಸ್ಸಿ ರೋಗವನ್ನು ಪರಿಗಣಿಸಿ ಮಕ್ಕಳಿಗೆ ಉಚಿತ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕಿದೆ. 

ಒಂದಾದ ಮೇಲೊಂದರಂತೆ ಅಟ್ಟಹಾಸ ಮೆರೆಯುತ್ತಿರುವ ಮಾರಕ ಕಾಯಿಲೆಗಳು ಒಂದು ಕಡೆಯಾದರೆ ಮತ್ತೊಂದೆಡೆ ಮನೆಯವರಿಗೆಲ್ಲ ಚಿಕಿತ್ಸೆಗೆ ಹಣ ಒದಗಿಸಲಾಗದೇ ಅದೆಷ್ಟೋ ಜನರು ಗೋಳಾಡುತ್ತಿದ್ದಾರೆ. ಇದರ ಮದ್ಯೆ ಇದೀಗ ಮಿಸ್ಸಿ ಕಾಟ ಶುರುವಾಗಿದ್ದು, ಮಕ್ಕಳ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲು ಮುಂದಾಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ ಹಿರೇಮಠ ನೇಮಕ

ಬೆಂಗಳೂರು : ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ್ ಹಿರೇಮಠ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್​.ಎಂ.ರೇವಣ್ಣ, ಶಾಸಕ...

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

Recent Comments