ಗೆಲುವಿನ ಅಲೆಯಲ್ಲಿ ಸೋಲುಂಡ ಟೀಮ್​ ಇಂಡಿಯಾ

0
237

ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯ ಮೊದಲ 3 ಪಂದ್ಯಗಳನ್ನು ಗೆದ್ದು ಬೀಗಿದ್ದ ಟೀಮ್​ಇಂಡಿಯಾ 4ನೇ ಏಕದಿನದಲ್ಲಿ ಮುಗ್ಗರಿಸಿದೆ. ಅತಿಥೇಯ ತಂಡದ ಶಿಸ್ತುಬದ್ಧ ಬೌಲಿಂಗ್​ ದಾಳಿಗೆ ತತ್ತರಿಸಿದ ಟೀಮ್​ಇಂಡಿಯಾ 4ನೇ ಏಕದಿನದಲ್ಲಿ ಸೋಲುಂಡಿದೆ. ಆಲ್​ರೌಂಡ್​ ಫರ್ಮಾರ್ಮೆನ್ಸ್ ನೀಡಿದ ನ್ಯೂಜಿಲೆಂಡ್ 8 ವಿಕೆಟ್​ಗಳ ಜಯ ಸಾಧಿಸಿದೆ. 

ಪಂದ್ಯದಲ್ಲಿ ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ಇಂಡಿಯಾ ನೀರಸ ಪ್ರದರ್ಶನ ನೀಡಿತು. ಸ್ಪಿನ್ನರ್ ಯಜುವೇಂದ್ರ ಚಾಹಲ್ ದಾಖಲಿಸಿದ 18 ರನ್​ಗಳೇ ಭಾರತದ ಪರ ದಾಖಲಾದ ವ್ಯಕ್ತಿಗತ ಬೆಸ್ಟ್​​ ಸ್ಕೋರ್​ ಆಯ್ತು. ಕಿವೀಸ್​ ವೇಗಿಗಳಾದ ಟ್ರೆಂಟ್​ ಬೋಲ್ಟ್​​ ಹಾಗೂ ಕೋಲಿನ್​ ಗ್ರಾಂಡ್​​ಹೋಮ್​ ಬೌಲಿಂಗ್​ ದಾಳಿಗೆ ನಲುಗಿದ ಭಾರತ ಕೇವಲ 92 ರನ್​ಗಳಿಗೆ ಆಲೌಟ್​ ಆಯ್ತು. 93 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಅತಿಥೇಯ ಪಡೆ ಕೇವಲ 14.4 ಓವರ್​ಗಳಲ್ಲಿ 2 ವಿಕೆಟ್​​ ಕಳೆದುಕೊಂಡು ನಿರಾಯಾಸವಾಗಿ ಗುರಿ ತಲುಪಿತು. ಈ ಮೂಲಕ ಸರಣಿಯಲ್ಲಿ ನ್ಯೂಜಿಲೆಂಡ್​ ಮೊದಲ ಗೆಲುವು ದಾಖಲಿಸಿತು.  ಟ್ರೆಂಟ್​​ಬೋಲ್ಟ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 

LEAVE A REPLY

Please enter your comment!
Please enter your name here