ಕ್ರಿಕೆಟ್ ಪ್ರಿಯರಿಗೆ ಇಂದು ಡಬಲ್ ಧಮಾಕ..!

0
118

ವಿಶ್ವ ಸಮರ ರಂಗೇರುತ್ತಿದೆ. ಇಂದು ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ  ಶ್ರೀಲಂಕಾ  ನ್ಯೂಜಿಲೆಂಡ್​ ಅನ್ನು ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾಕ ಕ್ರಿಕೆಟ್ ಶಿಶು ಅಫ್ಘಾನಿಸ್ತಾನವನ್ನು ಎದುರಿಸಲಿದೆ. 

12ನೇ ಆವೃತ್ತಿಯ ವಿಶ್ವಕಪ್​ನ 3ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ದಿಮಿತ್​ ಕರುಣರತ್ನೆ ನಾಯಕತ್ವದ ಸಿಂಹಳಿಯರು ಹಾಗೂ ಕೇನ್​ ವಿಲಿಯಮ್ಸ್​ ನಾಯಕತ್ವದ ಬ್ಲಾಕ್​ಕ್ಯಾಪ್ಸ್​​ಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಕಾರ್ಡಿಫ್​ನ ಸೋಪಿಯಾ ಗಾರ್ಡನ್ಸ್​ ಸಾಕ್ಷಿಯಾಗಲಿದೆ.

ವಿಶ್ವಕಪ್ ಪಂದ್ಯಾವಳಿ ಆರಂಭಕ್ಕು ಮುನ್ನ ನಡೆದ ಅಭ್ಯಾಸ ಪಂದ್ಯಗಳಲ್ಲಿ ಶ್ರೀಲಂಕಾ ಎರಡೂ ಮ್ಯಾಚ್​ ಗಳನ್ನು ಸೋಲುಂಡಿದೆ. ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 87ರನ್​ ಗಳಿಂದ ಸೋಲನುಭವಿಸಿದ್ದ ಕರುಣರತ್ನೆ ಪಡೆ ಎರಡನೇ ಪ್ರಾಕ್ಟಿಸ್​ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್​ ಗಳಿಂದ ಸೋತು ಸುಣ್ಣಾಗಿದೆ.

ನ್ಯೂಜಿಲೆಂಡ್​ ಎರಡು ಅಭ್ಯಾಸ ಪಂದ್ಯಗಳಲ್ಲಿ ತಲಾ 1 ಗೆಲುವು ಮತ್ತು 1 ಸೋಲನ್ನು ಅನುಭಿಸಿದೆ. ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 6 ವಿಕೆಟ್ ಗಳಿಂದ ಗೆದ್ದು ಬೀಗಿದ್ದ ನ್ಯೂಜಿಲೆಂಡ್​ 2ನೇ ಪಂದ್ಯದಲ್ಲಿ ವೆಸ್ಟ್​ಇಂಡೀಸ್ ವಿರುದ್ಧ 91ರನ್​​ ಗಳ ಸೋಲನುಭವಿಸಿದೆ.

ಇನ್ನು ವಿಶ್ವಕಪ್ ಇತಿಹಾಸವನ್ನು ನೋಡಿದ್ರೆ ಶ್ರೀಲಂಕಾ ಮತ್ತು ನ್ಯೂಜಿಲೆಂಡ್​  ಒಟ್ಟು 10 ಬಾರಿ ಮುಖಾಮುಖಿ ಆಗಿವೆ. ಅದರಲ್ಲಿ 6 ಪಂದ್ಯಗಳಲ್ಲಿ ಶ್ರೀಲಂಕಾ ಗೆದ್ದಿದ್ದು, 4ರಲ್ಲಿ ನ್ಯೂಜಿಲೆಂಡ್​ ಗೆಲುವು ಸಾಧಿಸಿದೆ. ಅಂಕಿ-ಅಂಶಗಳ ಸಣ್ಣಪುಟ್ಟ ಅಂತರವನ್ನು ಬಿಟ್ರೆ ಎರಡೂ ತಂಡಗಳು ಸಮಾನ ಬಲಾಬಲವನ್ನು ಹೊಂದಿವೆ ಅನ್ನೋದ್ರಲ್ಲಿ ನೋ ಡೌಟ್.

ಶ್ರೀಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿಯುವ ನಾಯಕ ದಿಮಿತ್​​​ ಕರುಣರತ್ನೆ ಮತ್ತು ಲಹಿರು ತಿರುಮನ್ನೆ ಉತ್ತಮ ಆರಂಭವನ್ನು ಒದಗಿಸಬಲ್ಲರು. ಇವರಲ್ಲದೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್​ ಕೀಪರ್ ಕುಸಲ್ ಪೆರೇರಾ, ಕುಸಲ್ ಮೆಂಡೀಸ್​, ಮ್ಯಾಥ್ಯುಸ್​​ ಆಧಾರವಾಗಿ ನಿಲ್ಲಬಲ್ಲರು. ಜೊತೆಗೆ ಧನಂಜಯ್​ ಡಿ ಸಿಲ್ವಾ ಜೀವನ್ ಮೆಂಡೀಸ್​ ಆಲ್​ ರೌಂಡಿಂಗ್ ಪರ್ಫಾರ್ಮೆನ್ಸ್​ನಿಂದ ತಂಡಕ್ಕೆ ನೆರವಾಗಲಿದ್ದಾರೆ. ಲಸಿತ್​ಮಲಿಂಗ, ಲಕ್ಮಲ್​,  ಉದಾನಾ ಬೌಲಿಂಗ್ ಅಸ್ತ್ರಗಳಾಗಿದ್ದಾರೆ. 

ನ್ಯೂಜಿಲೆಂಡ್​​ ಕೂಡ ಘಟಾನುಘಟಿ ಆಟಗಾರರನ್ನು ಹೊಂದಿರೋ ಟೀಮ್. ನಾಯಕ ಕೇನ್​ ವಿಲಿಯಮ್ಸ್​, ರಾಸ್​ ಟೇಲರ್​,  ಮಾರ್ಟಿನ್​ ಗಪ್ಟಿಲ್​  ಮನ್ರೋ ಬ್ಯಾಟಿಂಗ್ ಶಕ್ತಿಗಳಾಗಿದ್ದರೆ. ಜೇಮ್ಸ್ ನೀಶಮ್, ಮಿಚೆಲ್ ಸ್ಯಾಟ್ನೇರ್ ಆಲ್​ರೌಂಡರ್ ಆಗಿ ತಂಡಕ್ಕೆ ಆಧಾರವಾಗಿದ್ದಾರೆ. ಬೋಲ್ಟ್,  ಲೂಕಿ ಫರ್ಗುಸನ್, ಟಿಮ್ ಸೌಧಿ  ಪ್ರಮುಖ ಬೌಲರ್​ಗಳು. ಒಟ್ಟಿನಲ್ಲಿ ಎರಡೂ ತಂಡಗಳಿಂದ ಸಮ-ಬಲದ ಹೋರಾಟ ಪಕ್ಕಾ.

ಇದರ ಜೊತೆಗೆ ಇಂದು ನಡೆಯುವ 2ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಪ್ರಬಲ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಬ್ರಿಸ್ಟೆಲ್​ನ ಕೌಂಟಿಗ್ರೌಂಡ್ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ಆ್ಯರೋನ್ ಫಿಂಚ್​ ನಾಯಕತ್ವದ ಆಸ್ಟ್ರೇಲಿಯಾ ಇಂಗ್ಲೆಂಡ್​​​ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ 12ರನ್ ಗಳಿಂದ ಗೆದ್ದಿತ್ತು. ಬಳಿಕ ಶ್ರೀಲಂಕಾ ವಿರುದ್ಧದ 2ನೇ ಅಭ್ಯಾಸ ಪಂದ್ಯದಲ್ಲಿ 5 ವಿಕೆಟ್​ಗಳಿಂದ ಗೆದ್ದಿದೆ. ಗುಲ್ಬದಿನ್ ನೈಬ್ ನಾಯಕತ್ವದ ಅಫ್ಘಾನಿಸ್ತಾನಕ್ಕಿಂತ ಆಸ್ಟ್ರೇಲಿಯಾ ಪ್ರಬಲ ತಂಡ ಅನ್ನುವುದರಲ್ಲಿ ಡೌಟಿಲ್ಲ. ಆದರೆ. ಅಂತರಾಷ್ಟ್ರೀಯ ಕ್ರಿಕೆಟ್​ ನಲ್ಲಿ ಅಪ್ಘಾನಿಸ್ತಾನ್ ಹಲವು ಬಾರಿ ಅಚ್ಚರಿ ಫಲಿತಾಂಶವನ್ನು ನೀಡಿದೆ.

ಮೊದಲ ತನ್ನ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನವನ್ನು 3 ವಿಕೆಟ್​ ಗಳಿಂದ ಮಣಿಸಿ ಅಪ್ಘಾನಿಸ್ತಾನ ಶಾಕ್ ನೀಡಿತ್ತು. ಆದರೆ. 2ನೇ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರದ್ಧ ಸೋಲನುಭವಿಸಿತ್ತು. ಇನ್ನು ಈ ಎರಡು ತಂಡಗಳು ವಿಶ್ವಕಪ್​ ನಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ ಆ ಪಂದ್ಯವನ್ನು ಗೆದ್ದಿತ್ತು.

ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ , ಮ್ಯಾಕ್ಸ್​ವೆಲ್​ ಸೇರಿದಂತೆ ಘಟಾನುಘಟಿ ಆಟಗಾರರನ್ನು ಹೊಂದಿರೋ ಆಸ್ಟ್ರೇಲಿಯಾ  6ನೇ ಬಾರಿ ಚಾಂಪಿಯನ್ ಆಗುವ ಕನಸನ್ನು ಕಂಡಿದ್ದು,  ಅಫ್ಘಾನ್ ಅನ್ನು ಲಘುವಾಗಿ ಪರಿಗಣಿಸಿದರೆ ಅಚ್ಚರಿಯ ಫಲಿತಾಂಶ ಎದುರಾಗಬಹುದು.

LEAVE A REPLY

Please enter your comment!
Please enter your name here