Sunday, May 29, 2022
Powertv Logo
Homeವಿದೇಶಕನ್ನಡಿಗ ರಾಹುಲ್ ನಾಯಕತ್ವದಲ್ಲಿ ಗೆದ್ದು ಬೀಗಿದ ಭಾರತ  ; ಸರಣಿ ಕ್ಲೀನ್ ಸ್ವೀಪ್ - ಸೃಷ್ಟಿಯಾಯ್ತು...

ಕನ್ನಡಿಗ ರಾಹುಲ್ ನಾಯಕತ್ವದಲ್ಲಿ ಗೆದ್ದು ಬೀಗಿದ ಭಾರತ  ; ಸರಣಿ ಕ್ಲೀನ್ ಸ್ವೀಪ್ – ಸೃಷ್ಟಿಯಾಯ್ತು ಇತಿಹಾಸ..!

ಮೌಂಟ್​​ ಮಾಂಗ್ನುಯಿ : ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಇದರೊಂದಿಗೆ ಕಿವೀಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿಯನ್ನು 5-0 ಅಂತರದಲ್ಲಿ ಗೆದ್ದ ಭಾರತ, 5 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ವಿಶ್ವದ ಮೊದಲ ತಂಡ ಎಂಬ ಕೀರ್ತಿಗೆ ಪಾತ್ರವಾಗಿದೆ. ಭಾರತದ ಫೀಲ್ಡಿಂಗ್ ವೇಳೆ ಕನ್ನಡಿಗ ಕೆ.ಎಲ್​ ರಾಹುಲ್​ ತಂಡವನ್ನು ಚೊಚ್ಚಲ ಬಾರಿಗೆ ತಂಡವನ್ನು ಮುನ್ನೆಡೆಸಿದ್ದು ವಿಶೇಷ.
ಮೌಂಟ್​ ಮಾಂಗ್ನುಯಿಯಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ರಾಂತಿ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಸಾರಥ್ಯವಹಿಸಿದ್ರು. ರಾಹುಲ್ ಜೊತೆ ಮೊದಲು ಬ್ಯಾಟಿಂಗ್​ಗಿಳಿದ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಎಡವಿದ್ರು. ಬಳಿಕ ಒಂದಾದ ರಾಹುಲ್ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಕಿವೀಸ್ ಬೌಲರ್​​ಗಳನ್ನು ಇನ್ನಿಲ್ಲದಂತೆ ಕಾಡಿದ್ರು. ಮತ್ತೊಮ್ಮೆ ಮಿಂಚಿದ ರಾಹುಲ್ 45ರನ್ ಮಾಡಿ ಪೆವಿಲಿಯನ್ ಸೇರಿದ್ರೆ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ( ಅಜೇಯ 60) ಬಾರಿಸಿ ಆಡುತ್ತಿದ್ದಾಗ ಗಾಯಗೊಂಡು ಪೆವಿಲಿಯನ್ ಕಡೆಗೆ ಮುಖಮಾಡಿದ್ರು. ದುಬೆ ಕೇವಲ 5ರನ್ ಮಾಡಿ ನಿರಾಸಿ ಮೂಡಿಸಿದ್ರೆ, ಶ್ರೇಯಸ್ ಅಯ್ಯರ್ ಅಜೇಯ 33ರನ್ ಹಾಗೂ ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ ಅಜೇಯ 11ರನ್ ಮಾಡಿ ತಂಡಕ್ಕೆ ನೆರವಾದ್ರು. ಅಂತಿಮವಾಗಿ ಭಾರತ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ಕಳ್ಕೊಂಡು 163 ರನ್ ಮಾಡಿತು.
ಗುರಿ ಬೆನ್ನತ್ತಿದ ನ್ಯೂಜಿಲೆಂಡ್​ ಪರ ವಿಕೆಟ್ ಕೀಪರ್ ಟಿಮ್ ಸೀಫರ್ಟ್ (50) ಹಾಗೂ ರಾಸ್ ಟೇಲರ್ (53) ಹೋರಾಟ ನಡೆಸಿದ್ದು ಬಿಟ್ಟರೆ, ಬೇರೆ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ಅಂತಿಮವಾಗಿ ನಿಗದಿತ 20 ಓವರ್​ಗಳಲ್ಲಿ ಕಿವೀಸ್​ 9 ವಿಕೆಟ್ ಕಳ್ಕೊಂಡು ಕೇವಲ 156ರನ್ ಮಾಡಲಷ್ಟೇ ಶಕ್ತವಾಯಿತು. ಭಾರತ 7ರನ್​ಗಳಿಂದ ಭರ್ಜರಿ ಜಯ ದಾಖಲಿಸಿತು.

LEAVE A REPLY

Please enter your comment!
Please enter your name here

- Advertisment -

Most Popular

Recent Comments