Friday, September 30, 2022
Powertv Logo
Homeವಿದೇಶಕಿವೀಸ್​ಗೆ ತಪ್ಪದ 'ರಾಹು'ಲ್​​ ಕಾಟ , 'ಪನಿಶ್​' ಪಾಂಡೆ - ಕನ್ನಡಿಗರ ಆಟಕ್ಕೆ ಒಲಿದ 'ಸೂಪರ್​'...

ಕಿವೀಸ್​ಗೆ ತಪ್ಪದ ‘ರಾಹು’ಲ್​​ ಕಾಟ , ‘ಪನಿಶ್​’ ಪಾಂಡೆ – ಕನ್ನಡಿಗರ ಆಟಕ್ಕೆ ಒಲಿದ ‘ಸೂಪರ್​’ ಗೆಲುವು..!

ವೆಲ್ಲಿಂಗ್ಟನ್ : ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಭರ್ಜರಿ ಆಟದ ನೆರವಿನಿಂದ ಟೀಮ್ ಇಂಡಿಯಾ ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಮತ್ತೊಂದು `ಸೂಪರ್’ ಗೆಲುವು ಪಡೆದಿದೆ.
ವೆಲ್ಲಿಂಗ್ಟನ್​ನ ಸ್ಕೈ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್​ಗಳಲ್ಲಿ 165ರನ್​ ಮಾಡಿತು. ಭಾರತದ ಪರ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ ಹೀರೋ ಆದರು. 26 ಬಾಲ್​ಗಳಲ್ಲಿ ಅಮೂಲ್ಯ 39ರನ್ ಸಿಡಿಸಿ ರಾಹುಲ್ ಮತ್ತೊಮ್ಮೆ ಮಿಂಚಿದ್ರೆ, ಮನೀಷ್​ ಪಾಂಡೆ ಅಜೇಯ 50ರನ್ ಸಿಡಿಸಿ ಸವಾಲಿನ ಗುರಿ ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ರು.
ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಮನ್ರೋ (64) ಮತ್ತು ಟಿಮ್ ಸೀಫರ್ಟ್ (57) ಅತ್ಯುತ್ತಮ ಆಟವಾಡಿ ಸರಣಿಯ ಮೊದಲ ಗೆಲುವಿನ ಆಸೆಯನ್ನು ಚಿಗುರಿಸಿದ್ದರು. ಆದರೆ ಅಂತಿಮ ಓವರ್​ಗಳಲ್ಲಿ ಭಾರತದ ದಾಳಿ ಎದುರಿಸಲು ವಿಫಲವಾಗಿದ್ದರಿಂದ ಪಂದ್ಯ ಟೈ ಆಯ್ತು. ಹೀಗಾಗಿ 3ನೇ ಪಂದ್ಯದಂತೆ ಈ 4ನೇ ಪಂದ್ಯದಲ್ಲೂ ಸೂಪರ್ ಓವರ್ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 13ರನ್ ಮಾಡಿತು. ಭಾರತದ ಪರ ಕನ್ನಡಿಗ ರಾಹುಲ್ ಮತ್ತು ಕ್ಯಾಪ್ಟನ ಕೊಹ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದರು. ರಾಹುಲ್ ಮೊದಲ ಬಾಲ್​ ಸಿಕ್ಸರ್​​​​​ಗೆ, ಎರಡನೇ ಬಾಲ್​ ಬೌಂಡರಿಗೆ ಅಟ್ಟಿದರು. ಬಳಿಕ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾಗಿ ಔಟಾದ್ರು. ನಂತರ ವಿರಾಟ್ ಕೊಹ್ಲಿ ಗೆಲುವಿನ ಔಪಚಾರಿಕತೆ ಪೂರೈಸಿದ್ರು. ಇದರೊಂದಿಗೆ ಸತತ ಎರಡನೇ ಸೂಪರ್ ಓವರ್ ಮ್ಯಾಚ್​​ನಲ್ಲಿ ಕಿವೀಸ್​ಗೆ ಅದೃಷ್ಟಕೈಕೊಟ್ಟಿತು.
5 ಪಂದ್ಯದ ಸರಣಿಯಲ್ಲಿ ಸತತ 4 ಪಂದ್ಯ ಗೆದ್ದಿರೋ ಭಾರತ ಸರಣಿ ಕ್ಲೀಲ್ ಸ್ವೀಪ್ ಮಾಡೋ ತವಕದಲ್ಲಿದೆ.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments