Sunday, May 29, 2022
Powertv Logo
Homeವಿದೇಶಒಂದಲ್ಲ ಎರಡೆರಡು ಶತಕದ ಜೊತೆಯಾಟದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್..!

ಒಂದಲ್ಲ ಎರಡೆರಡು ಶತಕದ ಜೊತೆಯಾಟದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್..!

ಮೌಂಟ್ ಮಾಂಗ್ನುಯಿ : ನ್ಯೂಜಿಲೆಂಡ್ ನೆಲದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಉತ್ತಮ ಪ್ರದರ್ಶನ ಮುಂದುವರೆಸಿದ್ದಾರೆ. 3ನೇ ಹಾಗೂ ಕೊನೆಯ ಒಡಿಐನಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.

ಮೌಂಟ್​ ಮಾಂಗ್ನುಯಿಯ ಬೇ ಓವೆಲ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಮ್ಯಾಚಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 62 ರನ್​ಗಳಿಗೆ ಆರಂಭಿಕರಾದ ಪೃಥ್ವಿ ಶಾ, ಮಯಾಂಕ್ ಅಗರ್​ವಾಲ್​ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್​ಗಿಳಿದ ರಾಹುಲ್ ಆಪತ್ಬಾಂಧವರಾದರು. ಶ್ರೇಯಸ್ ಅಯ್ಯರ್ ಜೊತೆ 100ರನ್ ಹಾಗೂ ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ ಜೊತೆ 107 ರನ್ ಜೊತೆಯಾಟವಾಡಿ ನ್ಯೂಜಿಲೆಂಡ್​ಗೆ ಸವಾಲಿನ ಮೊತ್ತ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಟಿ20 ಸರಣಿಯಲ್ಲಿ ಅತ್ಯುನ್ನತ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ರಾಹುಲ್ ಮೊದಲ ಏಕದಿನ ಸರಣಿಯಲ್ಲಿ ಅಜೇಯ 88ರನ್ ಮಾಡಿದ್ರು. ಎರಡನೇ ಪಂದ್ಯದಲ್ಲಿ ಕೇವಲ 4ರನ್ ಮಾಡಿ ನಿರಾಸೆ ಮೂಡಿಸಿದ್ದ ಅವರು, ಈ ಮ್ಯಾಚಲ್ಲಿ ಜಬರ್ದಸ್ತ್​ ಸೆಂಚುರಿ (112) ರನ್ ಬಾರಿಸಿದ್ದಾರೆ.
ರಾಹುಲ್ ಅವರಲ್ಲದೆ ಶ್ರೇಯಸ್ ಅಯ್ಯರ್ (62) ಮತ್ತು ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ (42)ರನ್ ತಂಡಕ್ಕೆ ನೆರವಾದರು.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments