ಒಡಿಐನಲ್ಲಿ ಮೂರೂ ಮ್ಯಾಚ್​ ಗೆದ್ದು, ಟಿ20 ಕ್ಲೀನ್​ ಸ್ವೀಪ್ ಸೇಡು ತೀರಿಸಿಕೊಂಡ ಕಿವೀಸ್..!

0
207

ಮೌಂಟ್ ಮಾಂಗ್ನುಯಿ : 5 ಮ್ಯಾಚ್​ಗಳ ಟಿ20 ಕ್ಲೀನ್ ಸ್ವೀಪ್​ ಮುಖಭಂಗದ ಸೇಡು ತೀರಿಸಿಕೊಳ್ಳುವಲ್ಲಿ ಅತಿಥೇಯ ನ್ಯೂಜಿಲೆಂಡ್ ಯಶಸ್ವಿಯಾಗಿದೆ. ಟೀಮ್ ಇಂಡಿಯಾ ವಿರುದ್ಧ 3 ಮ್ಯಾಚ್​ಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಕಿವೀಸ್ ಪಡೆ ಬೀಗಿದೆ.
ಮೌಂಟ್ ಮಾಂಗ್ನುಯಿನ ಬೇ ಓವೆಲ್ ಸ್ಟೇಡಿಯಂನಲ್ಲಿ ನಡೆದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆರಂಭಿಕರಾದ ಮಾರ್ಟಿನ್ ಗಪ್ಟಿಲ್ (66) ಮತ್ತು ಹೆನ್ರಿ ನಿಕೋಲ್ಸ್​ (80), ಕಾಲಿನ್ ಗ್ರ್ಯಾಂಡ್ ಹೋಮ್​ ( ಅಜೇಯ 58) ಭರ್ಜರಿ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್​​​​ ಗಳಿಂದ ಗೆಲ್ಲುವುದರೊಂದಿಗೆ ಟೀಮ್ ಇಂಡಿಯಾವನ್ನು ವೈಟ್ ವಾಶ್ ಮಾಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕನ್ನಡಿಗರದಾ ಕೆ.ಎಲ್​ ರಾಹುಲ್ (112), ಮನೀಷ್ ಪಾಂಡೆ (42), ಶ್ರೇಯಸ್ ಅಯ್ಯರ್ (62), ಆರಂಭಿಕ ಆಟಗಾರ ಪೃಥ್ವಿ ಶಾ (40) ಆಟದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 296ರನ್ ಮಾಡಿತ್ತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್​ಗೆ ಗಪ್ಟಿಲ್ ನಿಕೋಲ್ಸ್ ಉತ್ತಮ ಆರಂಭ ಒದಗಿಸಿದ್ರು. ಗ್ರ್ಯಾಂಡ್ ಹೋಮ್​ ಮತ್ತು ಟಾಮ್​ ಲತಮ್ (ಅಜೇಯ 32) ಗೆಲುವಿನ ದಡ ಸೇರಿಸಿದ್ರು.

LEAVE A REPLY

Please enter your comment!
Please enter your name here