Tuesday, September 27, 2022
Powertv Logo
Homeವಿದೇಶ'ಕಿವಿ' ಹಿಂಡಲು ಕೊಹ್ಲಿ ಪಡೆ ಸಜ್ಜು - ಗವಸ್ಕಾರ್, ಸಚಿನ್, ಸೆಹ್ವಾಗ್ ಸಾಲಿಗೆ ಸೇರಲಿದ್ದಾರೆ ರೋಹಿತ್...

‘ಕಿವಿ’ ಹಿಂಡಲು ಕೊಹ್ಲಿ ಪಡೆ ಸಜ್ಜು – ಗವಸ್ಕಾರ್, ಸಚಿನ್, ಸೆಹ್ವಾಗ್ ಸಾಲಿಗೆ ಸೇರಲಿದ್ದಾರೆ ರೋಹಿತ್ ಶರ್ಮಾ!

ಆಕ್ಲೆಂಡ್​ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5 ಮ್ಯಾಚ್​ಗಳ ಟಿ20 ಸರಣಿಯ ಮೊದಲ ಮ್ಯಾಚ್ ಇಂದು ಆಕ್ಲೆಂಡ್​ನ ಈಡನ್ ಪಾರ್ಕ್​​ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12.20ಕ್ಕೆ ಪಂದ್ಯ ಆರಂಭವಾಗ್ತಿದೆ. ಈ ಟೂರ್ನಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಮಾತ್ರವಲ್ಲದೆ ಉಪ ನಾಯಕ ರೋಹಿತ್ ಶರ್ಮಾಗೂ ಮಹ್ವತ್ವದ್ದು. ನ್ಯೂಜಿಲೆಂಡ್ ನೆಲದಲ್ಲಿ ಹಿಟ್​ ಮ್ಯಾನ್ ರೋಹಿತ್ ಶರ್ಮಾ ಹೊಸ ದಾಖಲೆ ಬರೆಯಲಿದ್ದಾರೆ. 
ಇಂಟರ್​ನ್ಯಾಷನಲ್ ಕ್ರಿಕೆಟಲ್ಲಿ ಓಪನರ್ ಆಗಿ ರೋಹಿತ್ 10 ಸಾವಿರ ರನ್ ಪೂರೈಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಪಕ್ಕಾ ಆಗಿದೆ. ರೋಹಿತ್​ಗೆ ಈ ಸಾಧನೆಗೆ ಬೇಕಿರೋದು ಕೇವಲ 63ರನ್ ಮಾತ್ರ. ಈ ಮೂಲಕ ಅವರು ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಸುನಿಲ್ ಗವಸ್ಕಾರ್, ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. 2013ರಲ್ಲಿ ಅಂದಿನ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಶರ್ಮಾ ಅವರನ್ನು ಓಪನಿಂಗ್ ಇಳಿಸುವ ನಿರ್ಧಾರಕ್ಕೆ ಬಂದರು. ಅಂದಿನಿಂದ ರೋಹಿತ್ ಹಿಂತಿರುಗಿ ನೋಡೇ ಇಲ್ಲ. ಆರಂಭಿಕನಾಗಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ 9,937ರನ್ ಸಿಡಿಸಿದ್ದಾರೆ. ಅಲ್ಲದೆ ಇನ್ನು 111 ರನ್ ಗಳಿಸಿದ್ರೆ ಇಂಟರ್ನ್ಯಾಷನಲ್ ಕ್ರಿಕೆಟಲ್ಲಿ 14ಸಾವಿರ ರನ್ ಪೂರೈಸಿದ ಎಂಟನೇ ಭಾರತೀಯ ಬ್ಯಾಟ್ಸ್​ಮನ್ ಅನ್ನೋ ಕೀರ್ತಿಗೆ ಶರ್ಮಾ ಭಾಜನರಾಗಲಿದ್ದಾರೆ.
ಕೊಹ್ಲಿ – ಶರ್ಮಾ ಫೈಟ್ : ಟಿ20 ಇಂಟರ್​​​ನ್ಯಾಷನಲ್​​ ಕ್ರಿಕೆಟ್​ನಲ್ಲಿ ಅತ್ಯದಿಕ ರನ್​​ಗಳಿಕೆ ಲಿಸ್ಟ್​ನಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಮತ್ತು ವೈಸ್​ ಕ್ಯಾಪ್ಟನ್​​ ಅವರದ್ದೇ ದರ್ಬಾರು. ಕ್ಯಾಪ್ಟನ್ ಕೊಹ್ಲಿ 2,689ರನ್​ ಸಂಪಾದಿಸಿದ್ದರೆ, ರೋಹಿತ್ ಶರ್ಮಾ 2,633ರನ್ ಬಾರಿಸಿದ್ದಾರೆ. ಅಂದ್ರೆ ಕೊಹ್ಲಿಗಿಂತ ಶರ್ಮಾ ಕೇವಲ 56ರನ್​​ ಹಿನ್ನೆಡೆಯಲ್ಲಿದ್ದು, ಅಗ್ರಸ್ಥಾನಕ್ಕಾಗಿ ಅವರಿಬ್ಬರ ನಡುವೆ ಫೈಟ್ ಇದೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments