ಟೀಮ್ ಇಂಡಿಯಾದ ಭರವಸೆಯ ಯುವ ಆಟಗಾರ ಶ್ರೇಯಸ್ ಅಯ್ಯರ್ ಚೊಚ್ಚಲ ಏಕದಿನ ಶತಕ ಬಾರಿಸಿದ್ದಾರೆ. ಹ್ಯಾಮಿಲ್ಟನ್ನಲ್ಲಿ ನಡೆಯುತ್ತಿರೋ ನ್ಯೂಜಿಲೆಂಡ್ ವಿರುದ್ಧದ ಮೊದಲ ಒಡಿಐನಲ್ಲಿ 54ರನ್ ಗಳಿಗೆ ಇಬ್ಬರು ಆರಂಭಿಕರನ್ನು ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಕ್ಯಾಪ್ಟನ್ ಕೊಹ್ಲಿ ಜೊತೆಗೂಡಿದ ಅಯ್ಯರ್ ಆಧಾರವಾಗಿ ನಿಂತರು. ತಾಳ್ಮೆಯ ಆಟವಾಡಿದ ಅವರು, 107ಬಾಲ್ಗಳಿಗೆ 103ರನ್ ಮಾಡಿದರು.
ಹ್ಯಾಮಲ್ಟನ್ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಪೃಥ್ವಿ ಶಾ (20) ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ (32) ಜೊತೆ ಇನ್ನಿಂಗ್ಸ್ ಆರಂಭಿಸಿದರು. ಏಕದಿನ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಶಾ ತಂಡದ ಮೊತ್ತ 50ರನ್ ಆಗಿದ್ದಾಗ ಡಿ ಗ್ರಾಂಡ್ಹೋಮ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಪೃಥ್ವಿ ಬೆನ್ನಲ್ಲೇ ಮಯಾಂಕ್ ಅಗರ್ವಾಲ್ ಕೂಡ ಪೆವಿಲಿಯನ್ ಕಡೆಗೆ ಮುಖಮಾಡಿದ್ರು. ಬಳಿಕ ಒಂದಾದ ನಾಯಕ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ಬೌಲರ್ಗಳನ್ನು ಕಾಡಿದರು. ಈ ಜೋಡಿ ಶತಕದ ಜೊತೆಯಾಟವಾಡಿತು. ಕೊಹ್ಲಿ 51ರನ್ ಹಾಗೂ ಅಯ್ಯರ್ 103ರನ್ ಮಾಡಿದರು.
ರಾಹುಲ್ ಮಿಂಚಿನಾಟ : ಇನ್ನು ಟಿ20 ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ್ದ ಕನ್ನಡಿಗ ಇಂದು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರು. ಈಗಾಗಲೇ ಯಾವ್ದೇ ಕ್ರಮಾಂಕದಲ್ಲೂ ತಾನು ಬ್ಯಾಟ್ ಬೀಸಲು ರೆಡಿ ಅಂತ ಪ್ರೂವ್ ಮಾಡಿರೋ ಅವರು ಇಂದು ಕೂಡ ಮಿಂಚಿನಾಟ ಆಡಿದರು. 64 ಬಾಲ್ಗಳಲ್ಲಿ ಅಜೇಯ 88ರನ್ ಮಾಡಿ ಮತ್ತೊಮ್ಮೆ ನ್ಯೂಜಿಲೆಂಡ್ ಬೌಲರ್ಗಳಿಗೆ ಸಿಂಹಸ್ವಪ್ನರಾದರು.
ಭಾರತ ನಿಗದಿತ 50 ಓವರ್ಗಳಲ್ಲಿ 347ರನ್ ಗಳಿಸಿದೆ.
ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ; ಮಿಂಚಿನಾಟ ಮುಂದುವರೆಸಿದ
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on