ಬೆಂಗಳೂರು: ರೂಪಾಂತರಗೊಂಡ ಕೊರೋನ ವೈರಸ್ ಹಿನ್ನೆಯಲ್ಲಿ ರಾಜ್ಯದಾದ್ಯಂತ ಹೊಸ ವರ್ಷಾಚರಣೆಗೆ ಸರ್ಕಾರ ಟಪ್ ರೂಲ್ಸ್ ಜಾರಿ ಮಾಡಿದೆ. ಜೊತೆ ನ್ಯೂ ಇಯರ್ ಸೆಲೆಬ್ರೆಷನ್ ಗೆ ಬ್ರೇಕ್ ಹಾಕಿದೆ. ಹೊಸ ವರ್ಷದಂದು ನಿಯಮ ಉಲ್ಲಂಘನೆ ಮಾಡಿದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಇಂದು ರಾತ್ರಿ 10 ರಿಂದ ಜ.1ರ ಬೆಳಗ್ಗೆ 6 ಗಂಟೆವರೆಗೂ ಬಂದ್. ಬೆಂಗಳೂರಿನ ಎಲ್ಲಾ 44 ಫ್ಲೈ ಓವರ್ ಕ್ಲೋಸ್ ಆಗಿರುತ್ತೆ. ಪೊಲೀಸ್ ವಾಹನ, ತುರ್ತು ನಿರತ ವಾಹನಕ್ಕೆ ಮಾತ್ರ ಎಂಟ್ರಿ. ಫ್ಲೈ ಓವರ್ ಗಳ ಕೆಳಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ . ಬೆಂಗಳೂರು ನಗರ ಸಂಪರ್ಕಿಸುವ ರಸ್ತೆಗಳಲ್ಲಿ ನಾಕಾಬಂದಿ. ಹೋಟೇಲ್ ಗಳಿಗೆ ಹೋಗಬೇಕೆಂದ್ರು ನಡೆದುಕೊಂಡೆ ಹೋಗಬೇಕು
ಹೋಟೆಲ್ ಗೆ ಹೋಗುಬೇಕು ಎಂದರೂ ಪೋಲೀಸರಿಗೆ ಕೂಪನ್ ತೋರಿಸಿ ಹೋಗಬೇಕು. ನೈಸ್ ರಸ್ತೆಯಲ್ಲಿ ವ್ಹಿಲಿಂಗ್ ಗೆ ಅವಕಾಶ ವಿಲ್ಲ. ಡ್ರ್ಯಾಗ್ ರೇಸ್, ವ್ಹೀಲಿಂಗ್ ಸಂಪೂರ್ಣ ನಿಷೇಧ. ಸಂಚಾರ 2500ಕ್ಕೂ ಹೆಚ್ಚು ಸಿಬ್ಬಂದಿ ನೇಮಕ. ಜನರ ಅನುಕೂಲಕ್ಕಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಇನ್ನೂ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ರಸ್ತೆ, ಮ್ಯೂಸಿಯಂ ರಸ್ತೆ, ರೇಸ್ ಕೋರ್ಸ್, ರೆಸಿಡೆನ್ಸಿ ರಸ್ತೆ ,ಟ್ರಿನಿಟಿ ರಸ್ತೆ. ಇನ್ಫೆಂಟ್ರಿ ರಸ್ತೆಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವಂತಿಲ್ಲ. ಒಂದು ವೇಳೆ ಪಾರ್ಕಿಂಗ್ ಮಾಡಿದ್ದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.