ರಾಜ್​ಮಹಲ್ ಹೋಟೆಲ್​ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಹೊಸ ಟ್ವಿಸ್ಟ್​..!

0
223

ಬೆಂಗಳೂರು: ರಾಜ್​ಮಹಲ್ ಹೋಟೆಲ್​ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಐಟಿ ಇಲಾಖೆ ಡಿಜಿ ಬಾಲಕೃಷ್ಣ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಹೋಟೆಲ್​ನಲ್ಲಿ ಸುಮಾರು ₹1.67 ಕೋಟಿ ಸೀಜ್ ಆಗಿದೆ. ಈ ಹಣದ ಹಿಂದೆ ಪ್ರಭಾವಿಯೊಬ್ಬರ ಕೈವಾಡದ ಶಂಕೆ ಇದೆ. ದಾಳಿ ವೇಳೆ ಸಿಕ್ಕ ಹಣಕ್ಕೆ ಯಾವುದೇ ದಾಖಲಾತಿಗಳಿಲ್ಲ” ಅಂತ ಹೇಳಿದ್ದಾರೆ.

ಬೆಂಗಳೂರಿನ ರಾಜ್​ಮಹಲ್​ ಹೋಟೆಲ್​ನಲ್ಲಿ ಚುನಾವಣೆಗೆ ಗುತ್ತಿಗೆದಾರರಿಂದ ಹಣ ಸಂಗ್ರಹಿಸುತ್ತಿದ್ದ ಎಂಜಿನಿಯರ್​​​​​​​​​​​​​​​​​​​​​​​​​​​​​​​​​​​​​​​​​​​​​​​ ಐಟಿ ಬಲೆಗೆ ಬಿದ್ದಿದ್ದು, 25 ಲಕ್ಷಕ್ಕಿಂತ ಹೆಚ್ಚು ನಗದು ಹಣ ವಶಪಡಿಸಲಾಗಿದೆ. ರಾಜಮಹಲ್ ಹೋಟೆಲ್​ನಲ್ಲಿ ಎರಡು ರೂಮು ಮಾಡಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯ ಇಂಜಿನಿಯರ್​​​​​​ ರೂಮಲ್ಲಿ  ಕಂತೆ ಕಂತೆ ದುಡ್ಡು ಪತ್ತೆಯಾಗಿತ್ತು. ಬೆಂಗಳೂರು ಮತ್ತು ಹಾವೇರಿಯಲ್ಲಿ ಏಕಕಾಲಕ್ಕೆ ಐಟಿ ದಾಳಿ ನಡೆದಿತ್ತು. ನಾರಾಯಣಗೌಡ ಬಿ. ಪಾಟೀಲ್​​​​​ ಎರಡು ರೂಮು ಮಾಡಿ ಹಣ ಕಲೆಕ್ಷನ್ ಮಾಡುತ್ತಿದ್ದ. ದಾಳಿ ನಡೆಯುತ್ತಿದ್ದಂತೆ ಎಂಜಿನಿಯರ್ ನಾರಾಯಣ ಗೌಡ ಹೋಟೆಲ್​ನಿಂದ ಪರಾರಿಯಾಗಿದ್ದಾನೆ. ಕಳೆದ ತಿಂಗಳು 19  ರಿಂದ 26 ರವರೆಗೂ ಸರ್ಕಾರಿ ಹಾಗೂ ಸರ್ಕಾರೇತರ 76 ಸಂಸ್ಥೆಗಳ ಮೇಲೆ ಸರ್ವೆ ಮಾಡಲಾಗಿತ್ತು. ಸಂದರ್ಭ ಟಿಡಿಎಸ್ ಕಡಿತಗೊಳಿಸದ 501 ಕೋಟಿ ಆಕ್ರಮ ವ್ಯವಹಾರ ಪತ್ತೆಯಾಗಿತ್ತು.

LEAVE A REPLY

Please enter your comment!
Please enter your name here