ಟಿಕ್ ಟಾಕ್ ಆಪ್ ಬ್ಯಾನ್ ಆದ ಬಳಿಕ ಅದಕ್ಕೆ ಪರ್ಯಾಯ ಆಪ್ ಹುಡುಕಾಟ ಆರಂಭವಾಗಿತ್ತು. ಈಗ ಟಿಕ್ ಟಾಕ್ ನ ಆಲ್ಟರ್ನೇಟ್ ಆಪ್ ರೆಡಿಯಾಗಿದೆ. ಸೋಶಿಯಲ್ ಮೀಟಿಯಾದ ದಿಗ್ಗಜ ಫೇಸ್ ಬುಕ್ ಹೊಸ ಆಪ್ ಒಂದನ್ನು ಡಿಸೈನ್ ಮಾಡಿದೆ. ಫೇಸ್ ಬುಕ್ ಒಡೆತನದ ಇನ್ಸ್ಟಾಗ್ರಾಮ್ ರೀಲ್ಸ್ ಎಂಬ ಹೊಸ ಆಪ್ ಡಿಸೈನ್ ಮಾಡಿದ್ದು ಟೆಸ್ಟಿಂಗ್ ಹಂತ ಮುಗಿಸಿದೆ. ಇವತ್ತು ಸಂಜೆ 7.30ರ ಸುಮಾರಿಗೆ ಇದನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಾಗುವುದು. ರೀಲ್ ಆಪ್ ಅನ್ನು ನೀವು ಹೊಸದಾಗಿ ಡೌನ್ ಲೋಡ್ ಮಾಡಿಕೊಳ್ಳೋ ಅವಶ್ಯಕತೆ ಇಲ್ಲ. ನಿಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೇ, ಐಜಿಟಿವಿ ರೀತಿಯಲ್ಲೇ, ರೀಲ್ ಆಪ್ಷನ್ ಕೂಡ ಬಳಕೆ ಮಾಡಬಹುದು. ಇನ್ಸ್ಟಾಗ್ರಾಮ್ ಅಕೌಂಟ್ ಓಪನ್ ಮಾಡಿ, ಅದರಲ್ಲಿರುವ ರೀಲ್ ಆಪ್ಷನ್ ಕ್ಲಿಕ್ ಮಾಡಬೇಕು. ನಂತರ ಕ್ಯಾಮೆರಾ ಬಳಸಿ ನೀವು ನಿಮ್ಮ 15 ಸೆಕೆಂಡ್ ವಿಡಿಯೋ ರೆಕಾರ್ಡ್ ಮಾಡಿ, ಹಲವು ಟೂಲ್ ಗಳನ್ನು ಬಳಸಿ ಅದನ್ನು ಎಡಿಟ್ ಮಾಡಿ ಅಪ್ ಲೋಡ್ ಮಾಡಬಹುದು. ನಿಮಗೆ ಬೇಕಾದ ಮ್ಯೂಸಿಕ್, ಮತ್ತು ಎಫೆಕ್ಟ್ ಗಳನ್ನೂ ಬಳಸಬಹುದೆಂದು ಫೇಸ್ ಬುಕ್ ಸಂಸ್ಥೆ ಹೇಳಿದೆ. ಟಿಕ್ ಟಾಕ್ ಬ್ಯಾನ್ ಬಳಿಕ ಸಾಕಷ್ಟು ಬೇಡಿಕೆ ಬಂದ ಕಾರಣ ರೀಲ್ ಆಪ್ಷನ್ ಅಭಿವೃದ್ಧಿಪಡಿಸಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.