ದಾವಣಗೆರೆ: ಅವರೆಲ್ಲ ದುಡಿದು ತಿನ್ನುವ ವರ್ಗ, ಆಟೋ ಓಡಿಸುವ ಮೂಲಕ ಹತ್ತೋ ಇಪ್ಪತ್ತೋ ರೂಪಾಯಿ ಬಾಡಿಗೆ ಹಣ ಪಡೆದು ಜೀವನ ಸಾಗಿಸುವವರು, ಹೀಗಿರುವಾಗ ದಾವಣಗೆರೆ ಸ್ಮಾರ್ಟ್ ಸಿಟಿಯಿಂದ ಕಡಿಮೆ ದರದಲ್ಲಿ ಪರಿಸರ ಸ್ನೇಹಿ ಆಟೋಗಳು ಸಿಗುತ್ತೆ ಅಂತ ಸಾಲಸೋಲ ಮಾಡಿ ಆಸೆಯಿಂದ ಆಟೋ ಖರೀದಿಸಿದ್ದರು, ಆದರೆ ಆ ಆಟೋಗಳಿಂದ ಚಾಲಕರ ಬಿದೀಗೆ ಬಿದ್ದಿದ್ದಾರೆ.
ಮಧ್ಯ ಕರ್ನಾಟಕದ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾದಾಗಿನಿಂದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಮಾರ್ಟ್ ಆಗಿ ಕೆಲಸ ಮಾಡುತ್ತಲೆ ಬಂದಿದ್ದಾರೆ. ಆದರೆ ಈಗ ಸ್ಮಾರ್ಟ್ ಆಗಿ ದೋಖಾ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕಳೆದ ವರ್ಷ ನಗರದಲ್ಲಿ 9 ಇ- ಆಟೋಗಳನ್ನು ಆಯ್ದ ಫಲಾನುಭವಿಗಳಿಗೆ ನೀಡಲಾಗಿತ್ತು. 1 ಲಕ್ಷದ 80 ಸಾವಿರ ಮೌಲ್ಯವಿದ್ದ ಇ-ಆಟೋಗಳನ್ನು 80 ಸಾವಿರಕ್ಕೆ ನೀಡುತ್ತಿದ್ದು, ಸಬ್ಸಿಡಿ ಕೂಡ ನೀಡಲಾಗಿತ್ತು. ಆದರೆ ಆ ಆಟೋಗಳು ರಸ್ತೆಗೆ ಇಳಿದು ಪರಿಸರ ಸ್ನೇಹಿಯಾಗಿ ಜನರನ್ನು ಆಕರ್ಷಿಸುತ್ತದೆ, ನಮ್ಮ ಸಾಲ ತೀರುತ್ತದೆ ಎಂದು ಕನಸನ್ನು ಇಟ್ಟುಕೊಂಡವರ ಪಾಡು ಈಗ ಬೀದಿಪಾಲಾಗಿದೆ. ಆಟೋಗಳನ್ನು ತೆಗೆದುಕೊಂಡಾಗ ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿಲೋಮೀಟರ್ ಬರುತ್ತೆ ಎಂದು ಹೇಳಿದ್ರೆ. ಆಟೋ ಖರೀದಿ ಮಾಡಿದ ಪ್ರಾರಂಭದಲ್ಲಿ ಬಂತು ಎರಡು ತಿಂಗಳ ನಂತರ 30 ಕಿಲೋಮೀಟರ್ ಬರುವುದು ಕೂಡ ಕಷ್ಟವಾಗಿದೆ. ಅಲ್ಲದೆ ರಸ್ತೆಯಲ್ಲಿ ಹೋಗುವಾಗಿ ಪ್ರಯಾಣಿಕರಿಗೆ ಬೆನ್ನು ನೋವು ಬರ್ತಾ ಇದ್ದು. ಪ್ರಯಾಣಿಕರು ಆರ್ಧಕ್ಕೆ ಬಿಟ್ಟು ಹೋಗುತ್ತಿದ್ದಾರೆ. ಇನ್ನೊಂದು ಬಹುದೊಡ್ಡ ಸಮಸ್ಯೆ ಎಂದರೆ ಸಣ್ಣ ಹಂಸ್ ಹತ್ತಿಸಿದರು, ಆಟೋ ಪಲ್ಟಿಯಾಗುತ್ತಂತೆ, ಜೊತೆಗೆ ರೀಪೇರಿಗೆ ಬಂದರೆ ಇದರ ಸ್ಟೇರ್ ಪಾರ್ಟ್ಸ್ ಕೂಡ ಸಿಗೋದಿಲ್ಲ ಎನ್ನುತ್ತಿದ್ದಾರೆ ಆಟೋ ಚಾಲಕರು.
ಇಷ್ಟೇ ಅಲ್ಲದೆ ದಾವಣಗೆರೆಯಲ್ಲಿ 9 ಆಟೋಗಳನ್ನು ನೀಡಲಾಗಿದ್ದು. ಈ ಆಟೋಗಳು ಚಾಲಕರ ಹೆಸರಿನಲ್ಲಿ ಇರದೆ ಇದುವರೆಗೂ ಸ್ಮಾರ್ಟ್ ಸಿಟಿ ಎಂಡಿ ಯವರ ಹೆಸರಿನಲ್ಲೇ ಇದೆ. ಕೇವಲ ಲೋನ್ ಮಾತ್ರ ಇವರ ಹೆಸರಿಗೆ ಮಾಡಿಸಿದ್ದಾರೆ. ಅಲ್ಲದೆ ಆಟೋಗಳು ಇನ್ಶುರೆನ್ಸ್ ಕೂಡ ಥರ್ಡ್ ಪಾರ್ಟಿ ಎಂದು ಮಾಡಿದ್ದು, ಇದರಿಂದ ಆಟೋ ಗೆ ಏನಾದ್ರು ಅಪಘಾತವಾದ್ರೆ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಇನ್ಶುರೆನ್ಸ್ ಬರೋದಿಲ್ಲ ಎಂದು ಚಾಲಕರು ಹೇಳುತ್ತಿದ್ದಾರೆ. ಅಲ್ಲದೆ 9 ಆಟೋಗಳಲ್ಲಿ ಕೇವಲ ಎರಡು ಆಟೋಗಳು ಮಾತ್ರ ಸಂಚಾರ ಮಾಡುತ್ತಿದ್ದು, ಉಳಿದವೆಲ್ಲ ಮೂಲೆಗುಂಪಾಗಿವೆ. ಇದರ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಚಾಲಕರ ಅಳಲು. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಮಾರ್ಟ್ ಸಿಟಿ ಎಂಡಿ, ಸಮಸ್ಯೆ ಇರುವುದು ನಿಜ, ಈ ಬಗ್ಗೆ ಪರಿಶೀಲನೆ ಆಗುತ್ತಿದೆ. ಆಟೋ ವಿತರಣೆ ನಿಲ್ಲಿಸಲಾಗಿದೆ. ಈ ಹಿಂದೆ ಆಟೋ ಪಡೆದವರಿಗೆ ಸೂಕ್ತ ಪರಿಹಾರ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ.
ಒಟ್ಟಾರೆಯಾಗಿ ಸ್ಮಾರ್ಟ್ ಸಿಟಿ ಪರಿಸರ ಸ್ನೇಹಿ ಆಟೋಗಳು ಕಳಪೆ ಎಂದು ಸ್ವತಃ ಸ್ಮಾರ್ಟ್ ಸಿಟಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಇನ್ನಾದರು ಹಣ ವಾಪಾಸ್ ನೀಡುವ ಮೂಲಕ ಬಡ ಆಟೋ ಚಾಲಕರ ನೆರವಿಗೆ ನಿಲ್ಲಬೇಕಿದೆ.