ನವದೆಹಲಿ : ಪ್ರಧಾನ ಮಂತ್ರಿ ಅಧಿಕೃತ ವೆಬ್ಸೈಟ್ ಅನ್ನು ವಿಶ್ವ ಸಂಸ್ಥೆಯ 6 ಮತ್ತು ದೇಶದ 22 ಭಾಷೆಗಳಲ್ಲಿ ಮರು ವಿನ್ಯಾಸ ಮಾಡಲು ಉದ್ದೇಶಿಸಲಾಗಿದೆ. ಈ ಸಲುವಾಗಿ ಸರ್ಕಾರ ಏಜೆನ್ಸಿಗಳಿಂದ ಪ್ರಸ್ತಾವನೆ ಆಹ್ವಾನಿಸಿದೆ.
ಪ್ರಧಾನಮಂತ್ರಿ ಅಧಿಕೃತ ವೆಬ್ಸೈಟ್ ಸದ್ಯ 14 ಭಾಷೆಗಳಲ್ಲಿ ( ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲೆಯಾಳಂ, ಮಣಿಪುರಿ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು) ಲಭ್ಯವಿದೆ. ಅದನ್ನು ಮತಷ್ಟು ಅಭಿವೃದ್ಧಿ ಪಡಿಸಲು ಪಿಎಂ ಕಚೇರಿ ತೀರ್ಮಾನಿಸಿದೆ.
ವಿಶ್ವಸಂಸ್ಥೆಯ 6 ಭಾಷೆಗಳಾದ ಇಂಗ್ಲಿಷ್, ಅರೇಬಿಕ್, ಚೈನೀಸ್, ಫ್ರೆಂಚ್ , ರಷ್ಯನ್ ಸ್ಪ್ಯಾನಿಷ್ ಹಾಗೂ ಭಾರತೀಯ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಹಿಂದಿ, ಸಂಸ್ಕೃತ, ಉರ್ದು, ಅಸ್ಸಾಮಿ, ಬಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲೆಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂತಾಲಿ ಮತ್ತು ಸಿಂಧು, ಭಾಷೆಗಳಲ್ಲಿ ಲಭ್ಯವಾಗಲಿದೆ.
ಈಗಾಗಲೇ ಲಭ್ಯವಿರು 14 ಭಾಷೆಗಳನ್ನು (ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲೆಯಾಳಂ, ಮಣಿಪುರಿ, ಮರಾಠಿ, ಒರಿಯಾ ಪಂಜಾಬಿ, ತಮಿಳು, ತೆಲುಗು, ಉರ್ದು) ಹೊರತುಪಡಿಸಿ ಹೊಸದಾಗಿ ಸೇರ್ಪಡೆ ಆಗುತ್ತಿರೋ 14 ಭಾಷೆಗಳು
ಅರೇಬಿಕ್
ಚೈನೀಸ್
ಫ್ರೆಂಚ್
ರಷ್ಯನ್
ಸ್ಪ್ಯಾನಿಷ್
ಸಂಸ್ಕೃತ
ಬೋಡೋ
ಡೋಗ್ರಿ
ಕಾಶ್ಮೀರಿ
ಕೊಂಕಣಿ
ಮೈಥಿಲಿ
ನೇಪಾಳಿ
ಸಂತಾಲಿ
ಸಿಂಧು
ರಾಷ್ಟ್ರೀಯ ಇ – ಆಡಳಿತ ವಿಭಾಗ (ಎನ್ಇಜಿಡಿ) (ನ್ಯಾಷನಲ್ ಇ-ಗವರ್ನೆನ್ಸ್ ಡಿಪಾರ್ಟ್ಮೆಂಟ್ ) ಮಂಡಿಸಿದ ಪ್ರಸ್ತಾವನೆ (ಆರ್ಎಫ್ಪಿ) (ರಿಕ್ವೆಸ್ಟ್ ಫಾರ್ ಪ್ರೊಪೋಸಲ್) ಪ್ರಕಾರ ವೆಬ್ಸೈಟ್ಗಳ ವಿನ್ಯಾಸ, ಅಭಿವೃದ್ಧಿ ಹಾಗೂ ನಿರ್ವಹಣೆ ಕ್ಷೇತ್ರದಲ್ಲಿ ಅನುಭವವಿರುವ ಅರ್ಹ ಏಜೆನ್ಸಿಯನ್ನು ವೆಬ್ಸೈಟ್ ಮರುವಿನ್ಯಾಸಕ್ಕೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.