ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್​​; ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

0
4951

ಬೆಂಗಳೂರು: ಬಿಯಸ್​​ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿ ಹಲವು ದಿನಗಳು ಕಳೆದ್ರೂ ಸಚಿವ ಸಂಪುಟ ರಚನೆಯಾಗಿರಲಿಲ್ಲ. ಇದೀಗ ಕೊನೆಗೂ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್​​​ ಆಗಿದೆ.

  ಮೈತ್ರಿ ಸರ್ಕಾರ ಪತನವಾಗಿ ಬಿ.ಯಸ್.ಯಡಿಯೂರಪ್ಪರವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡು ಹಲವಾರು ದಿನಗಳೇ ಕಳೆದಿದೆ. ಆದ್ರೂ ಸಂಪುಟ ರಚನೆ ಮಾಡದ ಸಿಎಂ ಬಿಯಸ್​ವೈಯವರನ್ನು ಪ್ರತಿಪಕ್ಷಗಳು ಟೀಕಿಸಿದ್ದವು. ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿದ್ರು ಕೂಡ ಮಂತ್ರಿಮಂಡಲದಲ್ಲಿ ಸಚಿವರೇ ಇಲ್ಲದಿರುವುದು ಟೀಕೆಗೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಹೈಕಮಾಂಡ್​​ ಜೊತೆ ಚರ್ಚಿಸಲು ಸಿಎಂ ಬಿಯಸ್​ವೈ ಆ.೧೬ ರಂದು ದೆಹಲಿಗೆ ತೆರಳಲಿದ್ದು, ಆ.೧೮ ಕ್ಕೆ ಸಚಿವರ ಪ್ರಮಾಣ ವಚನಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಸಮಯ ನಿಗದಿಯಾಗಲಿದೆ.

  ಇನ್ನು ಈ ಬಾರಿ ಸಂಪುಟದಲ್ಲಿ ಯಾರ್ಯಾರಿಗೆ ಯಾವ್ಯಾವ ಖಾತೆಗಳು ಸಿಗಬಹುದೆಂದು ಕುತೂಹಲ ಉಂಟಾಗಿದ್ದು, ಸಂಭಾವ್ಯ ಸಚಿವರ ಹಾಗೂ ಸಂಭಾವ್ಯ ಖಾತೆಗಳ ಪಟ್ಟಿ ಇಂತಿವೆ… ಗೋವಿಂದ ಕಾರಜೋಳ- ಲೋಕೋಪಯೋಗಿ, ಕೆ.ಎಸ್.ಈಶ್ವರಪ್ಪ- ಗೃಹ, ಆರ್.ಅಶೋಕ್- ಸಾರಿಗೆ, ಜಗದೀಶ್ ಶೆಟ್ಟರ್- ಕಂದಾಯ, ವಿ.ಸೋಮಣ್ಣ- ನಗರಾಭಿವೃದ್ಧಿ, ಶ್ರೀರಾಮುಲು – ಸಮಾಜ ಕಲ್ಯಾಣ, ಡಾ.ಅಶ್ವತ್ಥನಾರಾಯಣ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಣುಕಾ ಚಾರ್ಯ- ಪೌರಾಡಳಿತ, ಉಮೇಶ್ ಕತ್ತಿ – ಕೃಷಿ, ಬಾಲಚಂದ್ರ ಜಾರಕಿಹೊಳಿ- ಕಾರ್ಮಿಕ ಇಲಾಖೆ, ಶಿವನಗೌಡ ನಾಯಕ್ – ಸಣ್ಣ ಕೈಗಾರಿಕೆ, ಯಸ್​.ಅಂಗಾರ – ಸಣ್ಣ ನೀರಾವರಿ,  ಕೋಟಾ ಶ್ರೀನಿವಾಸ ಪೂಜಾರಿ- ಮುಜರಾಯಿ ಮತ್ತು ಯೋಜನೆ, ಕೆ.ಜಿ.ಬೋಪಯ್ಯ- ಉನ್ನತ ಶಿಕ್ಷಣ, ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ.

LEAVE A REPLY

Please enter your comment!
Please enter your name here