ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮ ಪಂಚಾಯತಿಗೆ ಈಚೆಗಷ್ಟೇ ನೂತನ ಸದಸ್ಯರಾಗಿ ಚುನಾಯಿತರಾಗಿದ್ದ ಬಸರಕೋಡ ಗ್ರಾಮದ ಶಾಂತಗೌಡ ಯಮನಪ್ಪ ಮೇಟಿ (54) ತೀವ್ರ ಅನಾರೋಗ್ಯದಿಂದಾಗಿ ಇಂದು ಮದ್ಯಾಹ್ನ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ, ಅಪಾರ ಬಂಧು ಬಳಗ ಇದ್ದಾರೆ. ಬಸರಕೋಡ ಗ್ರಾ.ಪಂ ನ 4ನೇ ವಾರ್ಡನ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಗೌಡಪ್ಪಗೌಡ ಪಾಟೀಲ ಅವರನ್ನು ಸೋಲಿಸಿ 410 ಮತ ಪಡೆದು ಗೆಲುವು ಸಾಧಿಸಿದ್ದರು. ಫಲಿತಾಂಶ ಘೋಷಣೆಯ ನಂತರ ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರವನ್ನು ಪಡೆದುಕೊಂಡ ನಂತರ ಅನಾರೋಗ್ಯಕ್ಕಿಡಾಗಿದ್ದರು. ನಾಳೆ ಸ್ವಗ್ರಾಮವಾದ ಬಸಕೋಡದಲ್ಲಿ ಬೆಳಿಗ್ಗೆ 11 ಗಂಟೆಗೆ ಅವರ ಅಂತ್ಯ ಕ್ರಿಯೆ ನಡೆಯಲಿದೆ.