ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಡಿಜಿ&ಐಜಿಪಿ ಕಚೇರಿಯಿಂದ ರಾಜ್ಯದ ಪೊಲೀಸರಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
- ಪೊಲೀಸ್ ಠಾಣೆಗಳಿಗೆ ವಾರಕ್ಕೊಮ್ಮೆ ಕಡ್ಡಾಯವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು
- ಠಾಣೆಗಳಲ್ಲಿ ಕಂಪ್ಯೂಟರ್ ಹಾಗೂ ವಾಕಿಟಾಕಿಗಳನ್ನು ಬಳಸುವಾಗ ಗ್ಲೌಸ್ಗಳ ಬಳಕೆ
- ಇನ್ನು ಒಬ್ಬ ಸಿಬ್ಬಂದಿ ಬಳಸಿದ ಕಂಪ್ಯೂಟರ್ ಹಾಗೂ ವಾಕಿಟಾಕಿಗಳನ್ನು ಬಳಸುವ ಮುನ್ನ ಸ್ಯಾನಿಟೈಸರ್ ಮಾಡಿಕೊಳ್ಳಬೇಕು
- ಠಾಣೆಯ ಶೌಚಾಲಯಗಳನ್ನು ಆಗಾಗ ಶುಚಿಗೊಳಿಸಬೇಕು
- ದೂರು ನೀಡಲು ಬರುವವರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
- ದೂರು ನೀಡಲು ಬಂದವರಿಂದ ದಾಖಲಾತಿಗಳನ್ನು ಪಡೆಯುವಾಗ ಸ್ಯಾನಿಟೈಸರ್ ಬಳಸಬೇಕು
- ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು
- ಇನ್ನು ಠಾಣೆಯೊಳಗೆ ಬರುವ ಮುನ್ನ ಸೋಪಿನಿಂದ ಕೈತೊಳೆದುಕೊಂಡು ಬರುವಂತೆ ಸೂಚನಾ ಫಲಕ ಹಾಕಬೇಕು
- ಪೊಲೀಸರು ಹೋಟೆಲ್ ಆಹಾರ ಸೇವಿಸುವ ಬದಲು ಮನೆಯ ಆಹಾರ ಸೇವಿಸುವುದು ಉತ್ತಮ
- ಆರೋಪಿಯನ್ನು ಠಾಣೆಯಿಂದ ಕಳುಹಿಸಿದ ನಂತರ ಆರೋಪಿ ಇದ್ದ ರೂಂ ಹಾಗೂ ಆತ ಬಳಸಿದ ವಸ್ತುಗಳನ್ನು ಸ್ಯಾನಿಟೈಸ್ ಮಾಡಬೇಕು