Homeದೇಶ-ವಿದೇಶ'ಡಿಜಿಟಲ್‌ ಮೀಡಿಯಾಗೆ ಹೊಸ ಗೈಡ್‌ಲೈನ್ಸ್ '

‘ಡಿಜಿಟಲ್‌ ಮೀಡಿಯಾಗೆ ಹೊಸ ಗೈಡ್‌ಲೈನ್ಸ್ ‘

ಬೆಂಗಳೂರು: ಸೋಶಿಯಲ್ ಮೀಡಿಯಾಗಳಿಗೆ ಮೇಲೆ ಕೇಂದ್ರ ಸರ್ಕಾರ ಮೂಗುದಾರ ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗಳು ಹೆಚ್ಚಾಗುತ್ತಿವೆ. ನಿಂಧನೆ ಮಾಡುವಂತಹ ಪೋಸ್ಟ್ ಗಳನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರ ಸೋಶಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾಗೆ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಐಟಿ ಸಚಿವ ರವಿ ಶಂಕರ್ ಹೇಳಿದ್ದಾರೆ.

ಹೀಗಾಗಿ ಕೇಂದ್ರ ಸರ್ಕಾರ ಸಾಮಾಜಿಕ ಜಾಲ ತಾಣಗಳಿಗೆ ಹೊಸ ರೂಲ್ಸ್ ಬಿಡುಗಡೆ ಮಾಡಲಿದೆ. ನಿಂದನೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಂದನೆ ಪೋಸ್ಟ್ ಮಾಡಿದರೆ 24 ಗಂಟೆಯೊಳಗೆ ತರವು ಮಾಡಬೇಕು. ಸುಳ್ಳು ಸುದ್ದಿ ಪ್ರಸಾರ ಮಾಡುವುದನ್ನು ನಿಯಂತ್ರಿಸಬೇಕು. ಸುಳ್ಳು ಸುದ್ದಿಯ ಮೂಲ ಯಾವುದು ಎಂಬುದನ್ನು ಬಹಿರಂಗ ಮಾಡಬೇಕು.

ಮಾಧ್ಯಮಗಳ ಸ್ವಾತಂತ್ರಕ್ಕೆ ಸರ್ಕಾರ ಯಾವುದೇ ನಿರ್ಬಂಧ ಹೇರಲ್ಲ. ಆದರೆ ಸುದ್ದಿಯ ಸತ್ಯಾಸತ್ಯತೆಯನ್ನು ಮೊದಲು ಪರಿಶೀಲಿಸಬೇಕು ಎಂದು ಹೇಳಿದೆ. ಒಟಿಟಿ ಫ್ಲಾಟ್ ಫಾರ್ಮ್ ಗಳಿಗೂ ಇನ್ಮುಂದೆ ಹೊಸ ಮಾರ್ಗಸೂಚಿ ಬರಲಿದೆ. ಒಟಿಟಿ ಫ್ಲಾಟ್ ಫಾರ್ಮ್ ಗೆ ಮೂರು ಹಂತದ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಬೇಕು. ಮೊದಲ ಹಂತದಲ್ಲಿ ಯು/ಎ ಸರ್ಟಿಫಿಕೇಟ್ ಪಡೆಯಬೇಕು. ಎಲ್ಲಾ ಫ್ಲಾಟ್ ಫಾರ್ಮ್ ಗಳು ಐಬಿ ಖಾತೆಯಡಿ ಬರಬೇಕು.   

ದೇಶದಲ್ಲಿ ಸೋಶಿಯಲ್​​​​ ಮೀಡಿಯಾ ಉಪಯೋಗಿಸುವ ಸಂಖ್ಯೆ ಎಷ್ಟು ಗೊತ್ತಾ?

  • ವಾಟ್ಸ್​​​ಆ್ಯಪ್​​​​​ ಬಳಕೆದಾರರ ಸಂಖ್ಯೆ- 53 ಕೋಟಿ
  • ಯೂಟ್ಯೂಬ್​​​ ಬಳಕೆದಾರರ ಸಂಖ್ಯೆ – 44.8 ಕೋಟಿ
  • ಫೇಸ್​ಬುಕ್​​ ಬಳಕೆದಾರರ ಸಂಖ್ಯೆ – 41 ಕೋಟಿ
  • ಇನ್​​​ಸ್ಟಾಗ್ರಾಮ್​ ಬಳಕೆದಾರರ ಸಂಖ್ಯೆ – 21 ಕೋಟಿ
  • ಟ್ವಿಟರ್​​ ಬಳಸುತ್ತಿರುವವರ ಸಂಖ್ಯೆ – 1.75 ಕೋಟಿ

LEAVE A REPLY

Please enter your comment!
Please enter your name here

- Advertisment -

Most Popular

Recent Comments