Monday, January 17, 2022
Powertv Logo
Homeದೇಶಓಮಿಕ್ರಾನ್ : ಕೊರೋನ ವೈರಸ್​ನ ಹೊಸ ರೂಪಾಂತರ ತಳಿ

ಓಮಿಕ್ರಾನ್ : ಕೊರೋನ ವೈರಸ್​ನ ಹೊಸ ರೂಪಾಂತರ ತಳಿ

ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಕರೋನಾ ವೈರಸ್‌ನ ಹೊಸ ರೂಪಾಂತರವಾದ B 1.1.529 ಅನ್ನು ಕಳವಳಕಾರಿ ರೂಪಾಂತರ ತಳಿ/ ‘ವೇರಿಯಂಟ್ ಆಫ್ ಕನ್ಸರ್ನ್’ ವರ್ಗದಲ್ಲಿ ಇರಿಸಲಾಗಿದೆ. ಇದಕ್ಕೆ ‘ಓಮಿಕ್ರಾನ್’ ಎಂದು ಹೆಸರು ನೀಡಲಾಗಿದೆ. ಈ ರೂಪಾಂತರವನ್ನು ದಕ್ಷಿಣ ಆಫ್ರಿಕಾದ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ. ‘ಓಮಿಕ್ರಾನ್’ ರೂಪಾಂತರವು ಪ್ರಪಂಚದಾದ್ಯಂತ ಕೋವಿಡ್ ಸೋಂಕಿನ ಮರು-ಹರಡುವಿಕೆಯ ಬಗ್ಗೆ ಸಾಕಷ್ಟು ಆತಂಕ ಸೃಷ್ಟಿಸಿದೆ.

ಮೂಲ ವೈರಸ್‌ಗಿಂತ ಹೊಸ ರೂಪಾಂತರ ತಳಿಯು ಎಷ್ಟು ಭಿನ್ನವಾಗಿದೆ?

B.1.1.529ರೂಪಾಂತರದಲ್ಲಿ, ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ‘ತೀವ್ರ ಸ್ಪೈಕ್ ರೂಪಾಂತರಗಳ’ ಸಂಖ್ಯೆಯು 2 ಪಟ್ಟು ಹೆಚ್ಚು. ಈ ಹೊಸ ರೂಪಾಂತರದಲ್ಲಿ, ಸ್ಪೈಕ್ ಪ್ರೋಟೀನ್‌ನಲ್ಲಿ 32 ಹೆಚ್ಚು ಆತಂಕಕಾರಿ ರೂಪಾಂತರಗಳನ್ನು ಗಮನಿಸಲಾಗಿದೆ. ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ಇದು ನಿರ್ದಿಷ್ಟ ಕಾಳಜಿಯ ವಿಷಯವಾಗಿದೆ.

ಕಳವಳಕಾರಿ ರೂಪಾಂತರ ತಳಿ (Variant of Concern) ಮಾಹಿತಿ

1. ಪ್ರಸರಣದಲ್ಲಿ (transmissibility) ಹೆಚ್ಚಳ.

2. ಹೆಚ್ಚು ಗಂಭೀರವಾದ ಅನಾರೋಗ್ಯ, ಆಸ್ಪತ್ರೆಗೆ ದಾಖಲು ಅಥವಾ ಸಾವಿಗೆ ಕಾರಣವಾಗುತ್ತದೆ.

3. ಹಿಂದಿನ ಸೋಂಕು ಅಥವಾ ವ್ಯಾಕ್ಸಿನೇಷನ್ ಸಮಯದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳಿಂದ ವೈರಸ್​ನ ನಾಶದಲ್ಲಿ ಗಮನಾರ್ಹವಾದ ಕಡಿತ.

4. ಚಿಕಿತ್ಸೆಗಳು ಅಥವಾ ಲಸಿಕೆಗಳ ಪರಿಣಾಮಕಾರಿತ್ವದ ಕೊರತೆ ಅಥವಾ ಕ್ಲಿನಿಕಲ್ ರೋಗಲಕ್ಷಣಗಳನ್ನು ನಿಖರವಾಗಿ ಪತ್ತೆಹಚ್ಚುವಲ್ಲಿನ ವೈಫಲ್ಯಗಳು.

ಕಳವಳಕಾರಿ ರೂಪಾಂತರವನ್ನು ಹೇಗೆ ನಿಯಂತ್ರಿಸುವುದು.

1. ಇದನ್ನು ನಿಯಂತ್ರಿಸಲು, ಹೆಚ್ಚಿನ ಪರೀಕ್ಷೆಗಳು ಅಥವಾ ‘ರೂಪಾಂತರದ ವಿರುದ್ಧ ಲಸಿಕೆಗಳು’ಮತ್ತು ಚಿಕಿತ್ಸೆಗಳ ಪರಿಣಾಮಕಾರಿತ್ವವನ್ನು ನಿರ್ಧರಿಸು, ಸಂಶೋಧನೆ ಮುಂತಾದ ಸೂಕ್ತ ಆರೋಗ್ಯ ಕ್ರಮಗಳು ಅಗತ್ಯ.

2. ರೂಪಾಂತರದ ಗುಣಲಕ್ಷಣಗಳನ್ನು ಅವಲಂಬಿಸಿ, ಹೊಸ ರೋಗನಿರ್ಣಯ ವಿಧಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಲಸಿಕೆಗಳು ಮತ್ತು ಚಿಕಿತ್ಸೆಯನ್ನು ಮಾರ್ಪಡಿಸುವಂತಹ ಹೆಚ್ಚುವರಿ ಕ್ರಮಗಳನ್ನು ಪರಿಗಣಿಸಬಹುದು.

LEAVE A REPLY

Please enter your comment!
Please enter your name here

- Advertisment -

Most Popular

Recent Comments