Home ರಾಜ್ಯ ಇತರೆ ಕಣ್ಮರೆಯಾಗ್ತಿರೋ ಉಡುಪಿ ಕೈಮಗ್ಗದ ಸೀರೆ ಉಳಿವಿಗೆ ಚಳವಳಿ..!

ಕಣ್ಮರೆಯಾಗ್ತಿರೋ ಉಡುಪಿ ಕೈಮಗ್ಗದ ಸೀರೆ ಉಳಿವಿಗೆ ಚಳವಳಿ..!

ಉಡುಪಿ: ಸೀರೆಯುಟ್ಟ ನಾರಿ ಸೌಂದರ್ಯದ ಸಂಕೇತ. ಒಂದು ಕಾಲದಲ್ಲಿ ಉಡುಪಿ ಬ್ರಾಂಡ್ ಸೀರೆಗಳೆಂದರೆ ಮಹಿಳೆಯರು ಮುಗಿಬೀಳುತ್ತಿದ್ದರು. ಆದರೆ ಕ್ರಮೇಣ ಈ ಸೀರೆ ಮೂಲೆ ಸೇರಿದ್ದು, ಮತ್ತೆ ಹಳೇ ವೈಭವವನ್ನು ಮರುಕಳಿಸಲು ಚಳವಳಿಯೊಂದು ಆರಂಭವಾಗಿದೆ.

ಯಕ್ಷಗಾನ ಹೇಗೆ ಕರಾವಳಿಯ ಲಾಂಛನವೋ ಹಾಗೆಯೇ ಉಡುಪಿ ಸೀರೆಯೂ ಸಹ ಒಂದು ಕಾಲದಲ್ಲಿ ಕರಾವಳಿಯ ಸಿಂಬಲ್​ ಎಂದು ಹೇಳಲಾಗುತ್ತಿತ್ತು. ಉಡುಪಿಯ ಕೈಮಗ್ಗದ ಸೀರೆಯೆಂದರೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೂ ಅಚ್ಚುಮೆಚ್ಚು. ನಿನ್ನೆ ಮೊನ್ನೆಯವರೆಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರಿಗಂತಲೇ ಉಡುಪಿ ಸೀರೆ ನಿತ್ಯಬಳಕೆಗೆ ರವಾನೆಯಾಗುತ್ತಿತ್ತು. ಆದರೆ ಇದೀಗ ಈ ಸೀರೆ ಸದ್ದಿಲ್ಲದೆ ಕಣ್ಮರೆಯಾಗುತ್ತಿದೆ.

ಒಂದು ಕಾಲದಲ್ಲಿ 5 ಸಾವಿರ ನೇಕಾರರು ಉಡುಪಿ ಸೀರೆಯನ್ನು ನೇಯುತ್ತಿದ್ದರು. ಆದರೆ ಈಗ ಬರೀ 50 ಮಂದಿ ವೃದ್ಧರು ಮಾತ್ರ ಸೀರೆ ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಅಪರೂಪದ ಸೀರೆಗೆ ಮರುಜೀವ ನೀಡುವ ಉದ್ದೇಶದಿಂದ ಗಾಂಧಿವಾದಿ ಹೆಗ್ಗೋಡು ಪ್ರಸನ್ನ ದೇಸೀ ಚಳುವಳಿಯೊಂದಕ್ಕೆ ನಾಂದಿ ಹಾಡಿದ್ದಾರೆ.

ಯಕ್ಷಗಾನದಲ್ಲಿ ಬಳಸುವ ಕಲರ್​ಫುಲ್ ಬಟ್ಟೆಗಳ ವಿನ್ಯಸದಲ್ಲಿ ಕರಾವಳಿಯ ಕೈಮಗ್ಗದ ಜಾಣ್ಮೆಯನ್ನು ಕಾಣಬಹುದು. ಆದರೆ ಈಗೀಗ ಸೀರೆ ತೊಡುವವರೇ ಕಡಿಮೆಯಾಗುತ್ತಿದ್ದಾರೆ. ಆದರೆ ಅಪರೂಪದ ಕೈಮಗ್ಗದಿಂದ ತಯಾರಾಗುವ ಉಡುಪಿ ಸೀರೆಗಳನ್ನು ಖರೀದಿಸಲು ನಗರಪ್ರದೇಶದ ಮಹಿಳೆಯರು ಇವತ್ತಿಗೂ ಆಸಕ್ತಿವಹಿಸಿದ್ದಾರೆ. ಮದುವೆಯಂತಹ ಶುಭ ಕಾರ್ಯಗಳಿಗೆ ಕಡ್ಡಾಯವಾಗಿ ಉಡುಪಿ ಸೀರೆ ಬಳಸುವಂತಾದರೆ ಕೈಮಗ್ಗದಲ್ಲಿ ಮೂಡುವ ಅಂದದ ಸೀರೆಗಳಿಗೆ ಮರುಜೀವ ಬರುತ್ತೆ ಅನ್ನೋದು ಚಳುವಳಿಗಾರರ ಉದ್ದೇಶ. ಅದಕ್ಕಾಗಿ ಬೆಂಗಳೂರಿನಂತಹಾ ಮಹಾನಗರಗಳಲ್ಲಿ ಉಡುಪಿ ಸೀರೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಲಾಗುತ್ತಿದೆ.

ಒಟ್ಟಿನಲ್ಲಿ ಕಡುಬೇಸಗೆಯಲ್ಲಿ ಹತ್ತಿಯಷ್ಟು ಹಗುರದ ಅನುಭವ ನೀಡುವ ಉಡುಪಿ ಸೀರೆಗೆ ಮತ್ತಷ್ಟು ಬೇಡಿಗೆ ಬಂದು, ಸಾವಿರಾರು ನೇಕಾರರ ಬದುಕಿನ ವೈಭವ ಮತ್ತೆ ಮರಳಬೇಕಾಗಿದೆ.

ಅಶ್ವಥ್ ಆಚಾರ್ಯ, ಉಡುಪಿ

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments