ಈ ಡ್ರಿಂಕ್​ ಹೆಸ್ರು ಕೇಳಿದ್ರೆ ಸಾಕು ಕಿಕ್ ಏರುತ್ತೆ ; ಆದ್ರೆ ಇದು ಆರೋಗ್ಯಕಾರಿ!

0
515

ಏನೇನೋ ಸಾಫ್ಟ್​ ಡಿಂಕ್ಸ್​​ಗಳನ್ನು ಕುಡಿದು ನಾಲಿಗೆ ಜೊತೆ ಆರೋಗ್ಯ ಕೂಡ ಕೆಟ್ಟು ಹೋಗಿದೆಯಾ? ಡಿಫ್ರೆಂಟಾದ ಆರೋಗ್ಯಕರ ಪಾನೀಯ ಕುಡಿಯುವ ಆಸೆ ನಿಮಗಾಗಿದೆಯಾ…ಹಾಗಿದ್ರೆ ಈ ಡ್ರಿಂಕ್ ಟ್ರೈ ಮಾಡಿ … ಅರೇ ಯಾವುದು ಆ ಡ್ರಿಂಕ್ ? ಹೇಗಿರುತ್ತೆ ಅಂತೀರಾ ?
ನೀರಾ…ಈ ಪದ ಕೇಳಿದ್ರೆನೇ ಪಾನ ಪ್ರಿಯರ ಕಿಕ್ ಏರಿ ಬಿಡುತ್ತೆ. ಆದ್ರೆ ಕಿಕ್ ಏರುವ ನೀರಾ ಬೇರೆ. ಜಸ್ಟ್ ಪಾನೀಯ ರೂಪದಲ್ಲಿ ಸಿಗುವ ಆರೋಗ್ಯಕರ ನೀರಾ ಬೇರೆ. ಈ ಆರೋಗ್ಯಕರ ನೀರಾವನ್ನು ಲಾಲ್ಬಾಗ್ ನಲ್ಲಿ ಮಾರಾಟ ಮಾಡಲು ತೋಟಗಾರಿಕೆ ಇಲಾಖೆ ಅನುಮತಿ ನೀಡಿದೆ. ಅರೆ, ಇಷ್ಟು ದಿನ ನೀರಾ ಕುಡಿಬೇಕು ಅಂದ್ರೆ ಹಳ್ಳಿ ಕಡೆ ಪ್ರಯಾಣ ಮಾಡಬೇಕಿತ್ತು . ಆದರೆ ಈಗ ರಾಜಧಾನಿ ಬೆಂಗಳೂರಿನಲ್ಲಿ ಸಿಗುತ್ತಿದೆಯಾ? ಹೌದು, ನೀರಾ ಹುಡುಕಿಕೊಂಡು ಸಿಟಿ ಜನ ಎಲ್ಲೋ ಹೋಗಬೇಕಾಗಿಲ್ಲ. ನಗರದ ಲಾಲ್ಬಾಗ್​ ಅಥವಾ ಹೈ ಕೋರ್ಟ್​ ಬಳಿ ಹೋದ್ರೆ ಸಾಕು ಆರೋಗ್ಯಕರ ನೀರಾ ಸಿಗುತ್ತೆ!
ನೀರಾ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ರಾಜಧಾನಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನೂ ಪ್ರಾಯೋಗಿಕವಾಗಿ ನಗರದ 2 ರಿಂದ 3 ಕಡೆ ಈಗಾಗಲೇ ಆರಂಭಗೊಂಡಿದ್ದು ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ
‘ಮಲೆನಾಡು ನೆಟ್‌ ಅಂಡ್‌ ಸ್ಪೈಸ್‌ ರೈತ ಉತ್ಪಾದಕ ಕಂಪನಿಗೆ’ ಲೈಸೆನ್ಸ್ ಸಿಕ್ಕಿದ್ದು, ರಾಜ್ಯದ ಹಲವು ಕಡೆ ಈಗಾಗಲೇ ಮಾರಟವನ್ನು ಆರಂಭಿಸಿದೆ. ತೆಂಗಿನಿಂದ ನೀರಾ ತಯಾರಿಸಲಾಗುತ್ತದೆ. ನೀರಾ ಆರೋಗ್ಯಕರ ಹಾಗೂ ನೈಸರ್ಗಿಕ ಪೇಯ. ಅದರಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು ಇರಲಿವೆ. ಈ ಬಗ್ಗೆ ಅಧ್ಯಯನಗಳು ಕೂಡ ನಡೆದಿವೆ. ನೀರಾವನ್ನು ಕಾರ್ಬೋನೇಟೆಡ್ ಡ್ರಿಂಕ್ ಆಗಿಯೂ ಬಳಕೆ ಮಾಡಬಹುದು. ನೀರಾವನ್ನು 4 ಸೆಲ್ಸಿಯಸ್ ಡಿಗ್ರಿಗಿಂತ ಕಡಿಮೆ ಇಟ್ಟರೆ ಆಲ್ಕೋಹಾಲ್ ಆಗೋದಿಲ್ಲ. ಇಂತಹ ಪ್ಯೂರ್ ನೀರಾ ಸಿಟಿ ಜನರಿಗೆ ಒಳ್ಳೆಯ ಟೆಸ್ಟ್ ಕೊಟ್ಟಿದ್ದು, ಜನ ಎಂಜಾಯ್ ಮಾಡ್ತಿದ್ದಾರೆ.
-ಸ್ವಾತಿ ಪುಲಗಂಟಿ

LEAVE A REPLY

Please enter your comment!
Please enter your name here