ಬೆಂಗಳೂರು : `ಕೋಲು ಮಂಡೆ ಜಂಗಮ ದೇವ’ ವಿಡಿಯೋವನ್ನು ಆನಂದ್ ಆಡಿಯೋದಿಂದ ಡಿಲೀಟ್ ಮಾಡಿದ್ದರೂ ಗಾಯಕ ಚಂದನ್ ಶೆಟ್ಟಿಗೆ ಸಂಕಷ್ಟ ತಪ್ಪಿಲ್ಲ. ಅವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ NCR ದಾಖಲಾಗಿದೆ.
ಕೋಲು ಮಂಡೆ ಜಂಗಮ ದೇವ ಹಾಡಿನಲ್ಲಿ ಜನಪದ ಭಾವನೆಗೆ ಅವಮಾನಿಸಿದ್ದಾರೆ ಅಂತ ಭಜರಂಗದಳದ ಸದಸ್ಯ ತೇಜಸ್ ಎ ಎಂಬುವವರು ಚಂದನ್ ಶೆಟ್ಟಿ, ಆನಂದ್ ಆಡಿಯೋ ವಿರುದ್ಧ ದೂರು ದಾಖಲಿಸಿದ್ದಾರೆ.