ಫಿಲಿಪೈನ್ಸ್​ ಕಾಡಲ್ಲಿ ಬೆಂಗಳೂರು ಎಂಜಿನಿಯರ್ ನಾಪತ್ತೆ

0
144

ಬೆಂಗಳೂರಿನ ಎಂಜಿನಿಯರ್ ಒಬ್ಬರು ದೂರದ ಫಿಲಿಪೈನ್ಸ್​ ಕಾಡಿನಲ್ಲಿ ನಾಪತ್ತೆ ಆಗಿದ್ದಾರೆ. ಬೆಂಗಳೂರಿನ ರಾಜಾಜಿನಗರದ ನಿವಾಸಿ ನವೀನ್​ ನಾಗರಾಜ್ ನಾಪತ್ತೆಯಾದವರು. ಅವರು ಫ್ಲೈಟ್​ ಇನ್​ ಸ್ಟ್ರಕ್ಟರ್ ಆಗಿದ್ದಾರೆ. ಫಿಲಿಪೈನ್ಸ್​ನ ಸುಬಿಕ್ ಪ್ರದೇಶದ ಕಾಡಿನಲ್ಲಿ ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಹುಡುಕುತ್ತಿದ್ದರೂ ಸಿಕ್ಕಿಲ್ಲ. ಮೊದಲೆರೆಡು ದಿನಗಳ ಕಾಲ ಹುಡುಕಾಟ ನಡೆಸದೇ ನಿರ್ಲಕ್ಷ್ಯ ತೋರಲಾಗಿತ್ತು. ಮೂರನೇ ದಿನದಿಂದ ಹೆಲಿಕಾಪ್ಟರ್ ಮೂಲಕ ಹುಡುಕಾಟ ನಡೆಸಲಾಗುತ್ತಿದೆ. ಪುತ್ರನನ್ನು ಹುಡುಕಿ ಕೊಡುವಂತೆ ಭಾರತೀಯ ವಿದೇಶಾಂಗ ಕಾರ್ಯಾಲಯಕ್ಕೆ ನವೀನ್​ ವರ ತಂದೆ ನಾಗರಾಜ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here