ನವ ವೃಂದಾವನದ ಪುನರ್ ನಿರ್ಮಾಣ

0
911

ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿರುವ ನವವೃಂದಾವನದಲ್ಲಿನ ವ್ಯಾಸರಾಯರ ವೃಂದಾವನವನ್ನು ಮೊನ್ನೆ ರಾತ್ರಿ ದುಷ್ಕರ್ಮಿಗಳು ನಿಧಿ ಆಸೆಗಾಗಿ ಧ್ವಂಸಗೊಳಿಸಿದ್ದರು. ಈ ಹಿನ್ನಲೆಯಲ್ಲಿ ನಿನ್ನೆ ರಾಯರ ಮಠ, ಸೋಸಲೆ ಹಾಗೂ ಪೇಜಾವರ ಮಠದ ಶ್ರೀಗಳು ವೃಂದಾವನಕ್ಕೆ ಭೇಟಿ ನೀಡಿದ್ದರು. ಭೇಟಿ ಬಳಿಕ ವ್ಯಾಸರಾಯರ ವೃಂದಾವನ ಪುನರ್ ನಿರ್ಮಾಣದ ನಿರ್ಣಯ ಕೈಗೊಳ್ಳಲಾಗಿತ್ತು. ಶ್ರೀಗಳ ನಿರ್ಣಯದಂತೆ ಇಂದು ಬೆಳಗ್ಗೆಯಿಂದ ವ್ಯಾಸರಾಯರ ವೃಂದಾವನ ಪುನರ್ ನಿರ್ಮಾಣದ ಕಾರ್ಯ ಆರಂಭಗೊಂಡಿದೆ‌.
ಸೋಸಲೆಯ ವ್ಯಾಸರಾಜ ಮಠದ ಶ್ರೀ ವಿದ್ಯಾಮನೋಹರ ತೀರ್ಥರ ನೇತೃತ್ವದಲ್ಲಿ ನಡೆಯುತ್ತಿರುವ ವೃಂದಾವನ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ವೃಂದಾವನ ನಿರ್ಮಾಣದ ಹಿನ್ನಲೆಯಲ್ಲಿ ಭಕ್ತರಿಂದ ವೇದ ಪಾರಾಯಣ, ಹೋಮ ಹಮ್ಮಿಕೊಳ್ಳಲಾಗಿದೆ. ಪುನರ್ ನಿರ್ಮಾಣ ಕಾರ್ಯದಲ್ಲಿ 20 ಕ್ಕೂ ಹೆಚ್ಚು ಕಾರ್ಮಿಕರು ತೊಡಗಿದ್ದು, ವೃಂದಾವನದ ಪುನರ್ ನಿರ್ಮಾಣದ ಹಿನ್ನಲೆಯಲ್ಲಿ ನೂರಾರು ಭಕ್ತರು ನವವೃಂದಾನವಕ್ಕೆ ಭೇಟಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here