Home P.Special ಫೋಟೋಗ್ರಾಫರ್ ಕಣ್ಣಲ್ಲಿ ಕಂಡ 'ಪ್ರಕೃತಿ ಗಣಪ'..!

ಫೋಟೋಗ್ರಾಫರ್ ಕಣ್ಣಲ್ಲಿ ಕಂಡ ‘ಪ್ರಕೃತಿ ಗಣಪ’..!

ಮಂಗಳೂರು: ‘ರವಿ ಕಾಣದ್ದನ್ನ ಕವಿ ಕಂಡ’ ಅನ್ನೋ ಮಾತಿದೆ. ಹಾಗೆಯೇ ಮಂಗಳೂರಿನ ಹವ್ಯಾಸಿ ಛಾಯಾಚಿತ್ರಗ್ರಾಹಕರೊಬ್ಬರು ತನ್ನ ಕ್ಯಾಮೆರಾ ಕಣ್ಣಲ್ಲಿ ಪ್ರಕೃತಿಯಲ್ಲೇ ಗಣಪನನ್ನ ಕಂಡಿದ್ದಾರೆ. ಅವರು ಕಂಡ ನೈಸರ್ಗಿಕ ಗಣಪ ಇದೀಗ ಕಡಲನಗರಿಯೇ ನಮಿಸುವಂತೆ ಮಾಡಿದೆ. ಪ್ರಕೃತಿದತ್ತವಾಗಿ ಮರ-ಗಿಡ, ಪೊದೆಗಳಿಂದ ರೂಪಿತವಾದ ಪ್ರಥಮ ಪೂಜಿತನು ಇಲ್ಲಿ ಅತೀ ಎತ್ತರದಲ್ಲಿ ಪ್ರತಿಷ್ಠಾಪಿಸಿದಂತೆ ಕಂಡು ಬರುತ್ತಿದ್ದಾನೆ. ಆದರೆ ಯಾರ ಗಮನಕ್ಕೂ ಬಾರದಿದ್ದ ಈ ಪ್ರಕೃತಿ ಗಣಪನನ್ನ ಹವ್ಯಾಸಿ ಛಾಯಾಚಿತ್ರಗ್ರಾಹಕ ವಿಶಾಲ್ ವಾಮಂಜೂರು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಎಲ್ಲರಿಗೂ ಪ್ರಕೃತಿ ವಿಸ್ಮಯ ಗೊತ್ತಾಗುವಂತೆ ಮಾಡಿದ್ದಾರೆ.

ಚೌತಿ ಹಬ್ಬದ ದಿವಸವೇ ಕಂಡುಬಂದ ಈ ವಿಸ್ಮಯ ಕಂಡು ಕರಾವಳಿಯ ಜನ ಭಾವಪರವಶರಾಗಿದ್ದಾರೆ‌. ವಿಶಾಲ್ ವಾಮಂಜೂರು ಅವರ ಫೋಟೋ ವೈರಲ್ ಆಗುತ್ತಿದ್ದಂತೆ ಜನರು ವಾಮಂಜೂರಿನ ಕೆತ್ತಿಕಲ್​​ಗೆ ಆಗಮಿಸಿ ಪ್ರಕೃತಿದತ್ತ ಗಣಪನಿಗೆ ಭಕ್ತಿಪೂರ್ವಕವಾಗಿ ನಮಿಸುತ್ತಿದ್ದಾರೆ. ಸದ್ಯ ವಿಶಾಲ್ ಅವರ ಫೋಟೋ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಇನ್ನಿತರ ಫೋಟೋಗ್ರಾಫರ್ ಗಳು ಕೂಡ ತಮ್ಮ ಕ್ಯಾಮೆರಾದಲ್ಲಿ ಈ ಪ್ರಕೃತಿ ಗಣಪನನ್ನ ಇನ್ನಷ್ಟು ವಿಭಿನ್ನವಾಗಿ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ‌.

-ಇರ್ಷಾದ್ ಕಿನ್ನಿಗೋಳಿ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments