Homeರಾಜ್ಯ‘ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾದ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ’

‘ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾದ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ’

ಬೆಳಗಾವಿ: ಕಬ್ಬು,ಜೋಳ ಸೇರಿದಂತೆ ವಿವಿಧ  ಬೆಳೆಯುವ ಫಲವತ್ತಾದ ಜಮೀನು. ಅದೇ ಜಮೀನಿನಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ಮುಂದಾಗಿದೆ. ಇದು ರೈತರ ವಿರೋಧಕ್ಕೆ ಕಾರಣವಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನೂ ರೈತರ ಈ ಹೋರಾಟಕ್ಕೆ ರೈತ ಸಂಘಟನೆಗಳು ಸಾಥ್ ನೀಡಿವೆ. ಬೆಳಗಾವಿ ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟನೆ ಕಡಿಮೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಹೆದ್ಧಾರಿ ನಂಬರ್ 4 ಹಾಗೂ ಬೆಳಗಾವಿ ಬಳಿ ಖಾನಾಪೂರ ರಸ್ತೆಗೆ ಸಂಪರ್ಕ ಕಲ್ಪಿಸಲು ಮಚ್ಚೆ-ಹಲಗಾ‌ ನಡುವೆ  9 ಕಿಲೋ ಮೀಟರ್ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಂಡಿದೆ. ಭೂ ಸ್ವಾಧೀನಪಡಿಸಿಕೊಂಡ  ಅದರಲ್ಲಿ ಬಹುತೇಕ ರೈತರು ಪರಿಹಾರ ಪಡೆದುಕೊಂಡು ಭೂಮಿ ಬಿಟ್ಟುಕೊಡಲು ಒಪ್ಪಿಲ್ಲ. ಈ ಬೈ ಪಾಸ್ ರಸ್ತೆ ನಿರ್ಮಾಣಕ್ಕಾಗಿ ಒಟ್ಟು 1047ರೈತರು ಭೂಮಿ ಕಳೆದುಕೊಂಡಿದ್ದು, 150 ಎಕರೆ ಭೂ ಸ್ವಾಧೀನವಾಗಿದೆ. ಬೈ ಪಾಸ್ ರಸ್ತೆ ಕಾಮಗಾರಿಯನ್ನು ಅಶೋಕಾ ಎನ್ನುವ ಸಂಸ್ಥೆ ಪಡೆದುಕೊಂಡಿದ್ದು, ಇದು ರೈತರ ಒಪ್ಪಿಗೆ ಇಲ್ಲದಿದ್ದರೂ ಒತ್ತಾಯಪೂರ್ವಕವಾಗಿ ರೈತರ ಜಮೀನು ಪಡೆಯಲು ಮುಂದಾಗುತ್ತಿದೆ. ಇದನ್ನ ವಿರೋಧಿಸಿ 2002ರಿಂದ ಹೋರಾಟ ಮಾಡುತ್ತಿದ್ದರೂ, ಹಠಕ್ಕೆ ಬಿದ್ದವರಂತೆ ಭೂ ಸ್ವಾಧೀನಕ್ಕೆ ಅಧಿಕಾರಿಗಳು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಇವತ್ತು ಏಕಾಏಕಿ ಜೆಸಿಬಿಗಳ ಸಮೇತ ಬಂದು ಕಾಮಗಾರಿ ಮಾಡಲು ಮುಂದಾದ್ದಾಗ ರೈತರು ಅದಕ್ಕೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದರು. ಕಣ್ಣೀರು ಹಾಕಿ ವಾಗ್ವಾದಕ್ಕಿಳಿದರು. ವಿಷದ ಬಾಟಲಿ ಹಿಡಿದು ಆತ್ಮಹತ್ಯಗೂ ಸಹ ಯತ್ನ ಮಾಡಿದರು. ಹಗ್ಗಕ್ಕೆ ಕೋರಳೊಡ್ಡಿದರು .ಅಷ್ಟೇ ಅಲ್ಲ ಸ್ಥಳದಲ್ಲಿಯೇ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಸದ್ಯ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.

ಒಟ್ಟಿನಲ್ಲಿ ಜೀವ ಕೊಡ್ತೀವಿ ಹೊರತು ಒಂದಿಚ್ಚು ಭೂಮಿ ಬಿಟ್ಟು ಕೊಡುವುದಿಲ್ಲ ಅಂತ ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ. ಆದರೆ ಅನ್ನದಾತರ ಸಂಕಷ್ಟ ನಮ್ಮನ್ನಾಳುವ ಸರ್ಕಾರ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೇಳಿಸುತ್ತಿಲ್ಲ ಎಂದು ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments