ನಿಮ್ಮೂರಲ್ಲೇ ನಿಮ್ಮನ್ನು ಭೇಟಿಯಾಗಲಿದ್ದಾರೆ ಪವರ್ ಸ್ಟಾರ್..!

0
262

ನೆಚ್ಚಿನ ನಟರನ್ನು ಭೇಟಿಯಾಗಿ, ಅವರ ಜೊತೆಗೊಂದು ಸೆಲ್ಫಿ ತಗೋಬೇಕು ಅನ್ನೋದು ಅಭಿಮಾನಿಗಳ ಮಹದಾಸೆ..! ಅದಕ್ಕಾಗಿಯೇ ನಟರನ್ನು ಹುಡ್ಕೊಂಡು ಬಂದು ದಿನಗಟ್ಟಲೆ ಕಾದು, ಫೋಟೋ ತಗೊಂಡು ಹೋಗೋರು ಬಹಳಷ್ಟು ಮಂದಿ. ನಟರೂ ಅಷ್ಟೇ.. ಎಷ್ಟೇ ಬ್ಯುಸಿ ಇದ್ದರೂ ಅಭಿಮಾನಿಗಳಿಗೆ ಟೈಮ್​ ಇಲ್ಲ ಅಂತ ಹೇಳಲ್ಲ. ಯಾಕಂದ್ರೆ, ಅಭಿಮಾನಿಗಳಿಂದಲೇ ನಾವು ಅನ್ನೋದು ಪ್ರತಿಯೊಬ್ಬ ನಟರಿಗೂ ಗೊತ್ತು.
ಇಷ್ಟೆಲ್ಲಾ ಪೀಠಿಕೆ ಹಾಕೋಕೆ ಕಾರಣ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​..! ಯಾಕಂದ್ರೆ, ಪುನೀತ್ ನಿಮ್ಮನ್ನು ಭೇಟಿಯಾಗೋಕೆ ನಿಮ್ಮೂರಿಗೆ ಬರ್ತಾ ಇದ್ದಾರೆ.
ಹೌದು, ನಿಮಗೆ ಗೊತ್ತೇ ಇರುವಂತೆ ಪುನೀತ್ ಮತ್ತು ರಚಿತಾರಾಮ್​, ಅನುಪಮಾ ಪರಮೇಶ್ವರನ್ ಅಭಿನಯದ ‘ನಟಸಾರ್ವಭೌಮ’ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸನ್ನು ಅಭಿಮಾನಿಗಳ ಜೊತೆ ಸೆಲಬ್ರೇಟ್ ಮಾಡೋಕೆ ಅಪ್ಪು & ನಟಸಾರ್ವಭೌಮ ಟೀಮ್ ರಾಜ್ಯಪ್ರವಾಸ ಮಾಡಲು ಡಿಸೈಡ್ ಮಾಡಿದೆ.
ಮಾರ್ಚ್ 3ರಂದು ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ಸಿರಾ ಮತ್ತು ತುಮಕೂರಿನ ಚಿತ್ರಮಂದಿರಗಳಿಗೆ ಭೇಟಿ ಅಪ್ಪು ತನ್ನ ಟೀಮ್ ಜೊತೆ ಭೇಟಿ ನೀಡಲಿದ್ದಾರೆ. ಈಗಾಗಲೇ ಮಂಗಳೂರು, ಮೈಸೂರು, ಮದ್ದೂರು, ಮಂಡ್ಯ, ರಾಮನಗರ ಮತ್ತಿತರ ಕಡೆಗಳಿಗೆ ಪುನೀತ್ ಭೇಟಿ ನೀಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳತ್ತಲೂ ವಿಜಯಯಾತ್ರೆ ಕೈಗೊಳ್ಳಲು ಪ್ಲಾನ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here