ದೆಹಲಿ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಒಂದೂವರೆ ತಿಂಗಳಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರೊಟೆಸ್ಟ್ ನಡೆಸುತ್ತಿವೆ. ಇದರ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ದೇಶದ ಹೆಚ್ಚಿನ ರೈತರು ಮತ್ತು ತಜ್ಞರು ಕೃಷಿ ಕಾನೂನಿನ ಪರವಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದೆಹಲಿಯಲ್ಲಿಂದು ಮಾತನಾಡಿದ ಅವರು, ಈಗಾಗಲೇ ಒಂಭತ್ತು ಸುತ್ತಿನ ಮಾತುಕತೆಗಳು ವಿಫಲವಾಗಿದ್ದು, 10ನೇ ಸುತ್ತಿನ ಮಾತುಕತೆ ಜನವರಿ 19 ರಂದು ನಡೆಯಲಿದೆ. ಹೀಗಾಗಿ ಕಾಯ್ದೆ ಕುರಿತು ವ್ಯಾಪಾರಿಗಳ ನೋಂದಣಿ ಮತ್ತು ಇತರರ ಬಗ್ಗೆ ಅವರ ಆತಂಕಗಳನ್ನು ಪರಿಹರಿಸಲು ಸರ್ಕಾರ ಒಪ್ಪಿಕೊಂಡಿದೆ. ಹಾಗೆ ವಿದ್ಯುತ್ ಕುರಿತ ಕಾನೂನುಗಳನ್ನು ಚರ್ಚಿಸಲು ಸರ್ಕಾರ ಒಪ್ಪಿಕೊಟ್ಟಿತ್ತು. ಆದರೆ ಸಂಘಗಳು ಕಾನೂನುಗಳನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದಿದ್ದು, ಕೃಷಿ ಕಾಯ್ದೆಯನ್ನು ರದ್ದು ಮಾಡೋದಿಲ್ಲ ಎಂದು ಹೇಳಿದ್ದಾರೆ.