ವಯನಾಡ್: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಮತ್ತು ನರೇಂದ್ರ ಮೋದಿ ಒಂದೇ ಸಿದ್ಧಾಂತವನ್ನು ನಂಬಿದವರು ಹೊಂದಿರುವವರು. ಆದರೆ ಗೋಡ್ಸೆಯ ಸಿದ್ದಾಂತವನ್ನು ನಂಬುತ್ತೇನೆ ಹೇಳಲು ಮೋದಿಯವರಿಗೆ ಧೈರ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಕ್ಷೇತ್ರ ವಯನಾಡಿನ ಕಲ್ಪೆಟ್ಟದಲ್ಲಿ ‘ಸಂವಿಧಾನ ಉಳಿಸಿ’ ಜಾಥಾದಲ್ಲಿ ಪಾಲ್ಗೊಂಡ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾಥೂರಾಮ್ ಗೋಡ್ಸೆ ಯಾರನ್ನೂ ಇಷ್ಟಪಡುತ್ತಿರಲಿಲ್ಲ, ಆತನಿಗೆ ಯಾರ ಬಗ್ಗೆಯೂ ಕಾಳಜಿ ಇರಲಿಲ್ಲ, ತನ್ನನ್ನೇ ತಾನು ನಂಬುತ್ತಿರಲಿಲ್ಲ. ಈ ಕಾರಣಕ್ಕೆ ಆತ ಮಹಾತ್ಮ ಗಾಂಧಿಯನ್ನು ಕೊಂದ. ಹಾಗೇಯೇ ಪ್ರಧಾನಿ ನರೇಂದ್ರ ಮೋದಿ ಕೂಡಾ ಅವರನ್ನು ಮಾತ್ರ ಪ್ರೀತಿಸುತ್ತಾರೆ, ಅವರನ್ನು ಮಾತ್ರ ನಂಬುತ್ತಾರೆ’ ಎಂದು ಕಿಡಿ ಕಾರಿದ್ದಾರೆ.
ಎನ್ಆರ್ಸಿ ಮತ್ತು ಸಿಎಎಯಿಂದ ಉದ್ಯೋಗ ಸಿಗುವುದಿಲ್ಲ. ಉದ್ಯೋಗದ ಬಗ್ಗೆ ನರೇಂದ್ರ ಮೋದಿಯವರನ್ನು ಕೇಳಿದರೆ ಅವರು ಯಾವುದಕ್ಕೂ ಉತ್ತರಿಸದೆ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಈಗ ಭಾರತೀಯರು ನಾವು ಭಾರತದವರು ಎಂದು ನಿರೂಪಿಸಬೇಕಾಗಿ ಬಂದಿದೆ. ನಾವು ಭಾರತೀಯ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಲು ಮೋದಿ ಯಾರು? ಅವರಿಗೆ ಅದನ್ನು ನಿರ್ಧರಿಸುವ ಲೈಸೆನ್ಸ್ ಕೊಟ್ಟಿದ್ಯಾರು? ನನಗೆ ನಾನು ಭಾರತೀಯ ಎಂದು ಯಾರ ಮುಂದೆಯೂ ಸಾಬೀತು ಪಡಿಸುವ ಅವಶ್ಯಕತೆಯಿಲ್ಲ ಎಂದು ಹರಿಹಾಯ್ದಿದ್ದಾರೆ.
zithromax drug class
zithromax tri-pak