Home ರಾಜ್ಯ ನರೇಗಾ ಕೆಲಸಕ್ಕೆ ಹೋದವ ಶವವಾಗಿ ಬಂದ..!

ನರೇಗಾ ಕೆಲಸಕ್ಕೆ ಹೋದವ ಶವವಾಗಿ ಬಂದ..!

ಬಳ್ಳಾರಿ : ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಶವವಾಗಿ ಮನೆಗೆ ಬಂದ ದುರ್ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಗರನೂರು ಗ್ರಾಮದ ನಿವಾಸಿ ನಿಂಗಪ್ಪ ಈಡಿಗ (38) ಮೃತ ದುರ್ದೈವಿ.

ದೇವಗೊಂಡನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಉಪನಾಯಕನಹಳ್ಳಿಯ ಜಿನುಗು ಕೆರೆ ಹೂಳೆತ್ತುವ ಕೆಲಸಕ್ಕೆ ನಿಂಗಪ್ಪ ಹೋಗಿದ್ದ. ಕೆಲಸ ಮಾಡುವ ಸಂದರ್ಭದಲ್ಲಿ ಮಣ್ಣಿನ ಗುಡ್ಡೆ ಕುಸಿದು ಬಿದ್ದು ನಿಂಗಪ್ಪ ತೀವ್ರ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಆದರೆ,ಚಿಕಿತ್ಸೆ ಫಲಿಸದೆ ನಿಂಗಪ್ಪ ಅಸುನಿಗಿದ್ದಾನೆ.

ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದವ ಹೆಣವಾಗಿ ಮನೆಗೆ ಬಂದದ್ದು, ಕಂಡ ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿತ್ತು. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಗ್ರಾ. ಪಂ ಪಿಡಿಓ ವೀರಣ್ಣ ನಾಯ್ಕ್ 75  ಸಾವಿರ ಪರಿಹಾರ ಘೋಷಿಸಿದರು.

LEAVE A REPLY

Please enter your comment!
Please enter your name here

- Advertisment -

Most Popular

‘ಉಗ್ರ ಸ್ವರೂಪ ಪಡೆಯುತ್ತಿರುವ ಅನ್ನದಾತರ ಹೋರಾಟ’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರೈತರ ಪ್ರತಿಭಟನೆ ಕ್ಷಣ-ಕ್ಷಣಕ್ಕೂ ಉಗ್ರ ಸ್ವರೂಪ ಪಡೆಯುತ್ತಿದೆ. ರೈತರು ಸಿಂಘು ಬಾರ್ಡ್ ನಿಂದ ದೆಹಲಿ ರಿಂಗ್ ರೋಡ್ ಗೆ...

ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು..!

ಬೆಂಗಳೂರು: ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು. ಬೆಂಗಳೂರಿನ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರೈತರು ಪ್ರತಿಭಟನೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸರು ಹೆಬ್ಬಾಳದ ಮುಖ್ಯ ರಸ್ತೆಗೆ ಬ್ಯಾರಿಕೆಡ್ ಗಳನ್ನು ಹಾಕಿ ತಡೆಹಿಡೆಯಲಾಗಿದೆ. 50ಕ್ಕೂ ಹೆಚ್ಚು ಕಾರು...

‘ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟನೆಗೆ ಚಾಲನೆ’

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೈತರ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸಿದ್ದಾರೆ. ನಗರದ ಆರು ದಿಕ್ಕೂಗಳಿಂದ ರೈತರು ಬರುತ್ತಿದ್ದಾರೆ. ರಾಷ್ಟ್ರಗೀತೆ ಹಾಡುವ ಮೂಲಕ ರ್ಯಾಲಿಗೆ ಚಾಲನೆ...

‘ದೆಹಲಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯ ಸಿಂಘು, ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್ ಮುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿಯಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ.   ರೈತರು...

Recent Comments