ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕರಾದ ನಾರಾಯಣ ಮೂರ್ತಿ ದಂಪತಿ ಜೀವನಗಾಥೆ ಸಿನಿಮಾ ಆಗೋ ಸುದ್ದಿ ಗೊತ್ತೇ ಇದೆ. ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ಸದ್ಯ ಚಿತ್ರದ ಸ್ಕ್ರಿಪ್ಟ್ ವರ್ಕ್ನಲ್ಲಿ ಬ್ಯುಸಿ ಇದ್ದಾರೆ. ಸ್ಕ್ರಿಪ್ಟ್ ವರ್ಕ್ ಮುಗಿದ ಮೇಲೆ ತಾರಾಗಣವನ್ನು ಫೈನಲೈಸ್ ಮಾಡಲಿದ್ದಾರೆ.
ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಜೀವನದ ಏಳು – ಬೀಳುಗಳು, ಸಾಧನೆ ಹಾದಿ ಹಿಂದಿಯಲ್ಲಿ ಸಿನಿಮಾ ರೂಪ ಪಡೆಯೋದು ಖಚಿತವಾಗಿತ್ತು. ಇದೀಗ ಹೊಸ ಸಿಹಿ ಸುದ್ದಿಯೊಂದು ಕನ್ನಡ ಸಿನಿರಸಿಕರಿಗೆ ಸಿಕ್ಕಿದೆ. ಆ ಸುದ್ದಿ ಏನಪ್ಪ ಅಂದ್ರೆ, ಆ ಸಿನಿಮಾ ಕನ್ನಡದಲ್ಲೂ ತೆರೆಕಾಣಲಿದೆ ಅನ್ನೋದು!
ಕನ್ನಡ, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲಾಗುತ್ತೆ ಅನ್ನೋ ವಿಷಯವನ್ನು ನಿರ್ದೇಶಕಿ ಅಶ್ವಿನಿ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಹೀಗಾಗಿ ಕನ್ನಡದ ಹೆಮ್ಮೆಯ ನಾರಾಯಣ ಮೂರ್ತಿ, ಸುಧಾಮೂರ್ತಿ ಜೀವನ ಕಥನವನ್ನು ಕನ್ನಡದಲ್ಲೇ ತೆರೆ ಮೇಲೆ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿದೆ.
ಕನ್ನಡದಲ್ಲೂ ನಾರಾಯಣ ಮೂರ್ತಿ ದಂಪತಿ ಜೀವನಗಾಥೆ..!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on