Home ಸಿನಿ ಪವರ್ 4 ವರ್ಷದ ನಂತ್ರ 'ನಾನಿ' ಖ್ಯಾತಿಯ ಮನೀಶ್ ಕಮ್​ಬ್ಯಾಕ್

4 ವರ್ಷದ ನಂತ್ರ ‘ನಾನಿ’ ಖ್ಯಾತಿಯ ಮನೀಶ್ ಕಮ್​ಬ್ಯಾಕ್

 

ನಾನಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಟ ಮನೀಶ್, ಸಣ್ಣದೊಂದು ಗ್ಯಾಪ್​ನ ನಂತ್ರ, ಈಗ ಪವರ್​ಫುಲ್ ಕಂಬ್ಯಾಕ್ ಮಾಡ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಮತ್ತೆ ಸೌಂಡ್ ಮಾಡೋಕೆ ಸಜ್ಜಾಗಿದ್ದಾರೆ. 

2016ರಲ್ಲಿ ರಿಲೀಸ್ ಆದ ನಾನಿ ಸಿನಿಮಾ ಕನ್ನಡ ಸಿನಿಮಾರಂಗದಲ್ಲಿ ಹೊಸ ಅಲೆಯನ್ನ ಸೃಷ್ಟಿ ಮಾಡಿತ್ತು . ಅದ್ಬುತ ಮೇಕಿಂಗ್ , ಸಖತ್ ಸ್ಟೋರಿ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿತ್ತು ನಾನಿ ಸಿನಿಮಾ . ಮೇಕಿಂಗ್ ಮೂಲಕವೇ ಹೆಚ್ಚು ಸೌಂಡ್ ಮಾಡಿದ್ದ ನಾನಿ ಸಿನಿಮಾದಲ್ಲಿ ಸೂಪರ್ ಸಕ್ಸಸ್ ಕಂಡಿದ್ದು ಉದಯೋನ್ಮುಖ ನಟ ಮನೀಶ್ . ಈ ಸಿನಿಮಾದ ಪಾತ್ರ ಮನೀಶ್ ಸಿನಿ ಕರಿಯರ್ ಗೆ ಹೊಸ ಮೈಲೇಜ್ ತಂದು ಕೊಟ್ಟಿದ್ದು ಮಾತ್ರ ಸತ್ಯ
ನಾನಿ ಸಿನಿಮಾ ರಿಲೀಸ್ ಆದ್ಮೇಲೆ ಮನೀಶ್ ತಮ್ಮದೇ ಆದ ಫ್ಯಾನ್ ಬೇಸ್ ಕ್ರಿಯೇಟ್ ಮಾಡಿಕೊಂಡ್ರು . ಈ ಸಿನಿಮಾದ ನಂತ್ರ ಮನೀಶ್ ಕೆಲ ಸಿನಿಮಾಗಳ ಮೂಲಕ ಕಮ್ ಬ್ಯಾಕ್ ಆಗ್ತಾರೆ ಅನ್ನೋ ಸುದ್ದಿಗಳು ಹರಿದಾಡಿದ್ವು. ಆದ್ರೆ ಈಗ ಸೂಪರ್ ಸಬ್ಜೆಕ್ಟ್ ಮೂಲಕ ಮನೀಶ್ ಗ್ರಾಂಡ್ ಕಮ್ ಬ್ಯಾಕ್ ಆಗೋಕೆ ರೆಡಿಯಾಗಿದ್ದಾರೆ .

ಯಸ್ .. ನಾಲ್ಕು ವರ್ಷದ ನಂತ್ರ ಮನೀಷ್ ಅಭಿನಯದ ಕೆಂಪಾಪುರದ ಕಳ್ಳರು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
ಕೆಂಪಾಪುರದ ಕಳ್ಳರು ಸಿನಿಮಾ ವಿಭಿನ್ನ ಕಥೆಯನ್ನ ಹೊಂದಿದ್ದು, ಈ ಸಿನಿಮಾದಲ್ಲಿ ಒಟ್ಟು ಆರು ಡಿಫ್ರೆಂಟ್​ ಪಾತ್ರಗಳಲ್ಲಿ ಮನೀಶ್ ಕಾಣಿಸಿಕೊಂಡಿದ್ದಾರೆ . ಈ ಆರು ಪಾತ್ರಗಳಿಗೆ ಬೇಕಾದ ತಯಾರಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಮನೀಶ್ . 

ಈ ಕೆಂಪಾಪುರದ ಕಳ್ಳರು ಸಿನಿಮಾಗೆ ಯುವ ನಿರ್ದೇಶಕ ನಿಖಿಲ್ ಸ್ವಾಮಿ ಆಕ್ಷನ್ ಕಟ್ ಹೇಳಿದ್ದಾರೆ . ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ್ದ ನಿಖಿಲ್ ಅವರಿಗೆ ಇದು ಮೊದಲ ಸಿನಿಮಾ . ಈ ಸಿನಿಮಾದ ಕಥೆಯನ್ನ ಸ್ವತ: ನಿಖಿಲ್ ಅವರೇ ಬರೆದಿದ್ದಾರೆ . ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನ ನಿಖಿಲ್ ಹೊತ್ತಿದ್ದಾರೆ .

ಕೆಂಪಾಪುರದ ಕಳ್ಳರು ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ . ಇದೊಂದು ಕಾಮಿಡಿ ಥ್ರಿಲ್ಲರ್ ಸಿನಿಮಾವಾಗಿದ್ದು, ಆದಷ್ಟು ಬೇಗ ತೆರೆಯ ಮೇಲೆ ತರೋದಕ್ಕೆ ನಿಖಿಲ್ ಪ್ರಯತ್ನಿಸುತ್ತಿದ್ದಾರೆ. ಹಾಗೆ ಈ ಸಿನಿಮಾಗೆ ಗೆಳೆಯ ಮಧು ಅವರು ಸಾಹಿತ್ಯ ಮತ್ತು ಸಂಭಾಷಣೆಯನ್ನ ಬರೆದಿದ್ದಾರೆ. 

ಇದು ಕೆಂಪಾಪುರದ ಕಳ್ಳರು ಸಿನಿಮಾದ ವಿಷಯವಾದ್ರೆ ಮನೀಶ್ ಅಭಿನಯದ ಜಿಪಿಎಸ್ ಸಿನಿಮಾ ಕೂಡ ಈಗ ತೆರೆಯ ಮೇಲೆ ಬರೋದಕ್ಕೆ ರೆಡಿಯಾಗಿದೆ . ಲಾಕ್ ಡೌನ್ ಇಲ್ದೆ ಇದ್ದಿದ್ರೆ ಈ ಸಿನಿಮಾ ಈಗಾಗಲೇ ಥಿಯೇಟರ್ ಗೆ ಲಗ್ಗೆ ಇಡ್ತಿತ್ತು. ಈ ಸಿನಿಮಾಗೆ ಕಿರಣ್ ನಿರ್ದೇಶನ ಮಾಡಿದ್ರೆ . ಡೇವಿಡ್ ಎನ್ನುವವರು ಜಿಪಿಎಸ್ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ .


ಈ ಎರಡು ಸಿನಿಮಾಗಳ ನಂತ್ರ ಮನೀಶ್ ಅವರು ಮತ್ತೊಂದು ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಬ್ಯುಸಿಯಿಯಾಗಲಿದ್ದಾರೆ , ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಸ್ಟಿಂಗ್ ಆಪರೇಟರ್ ಪಾತ್ರದಲ್ಲಿ ಮನೀಶ್ ಕಾಣಿಸಿಕೊಳ್ಳಲಿದ್ದಾರೆ .ಈಗಾಗಲೇ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಶೂಟಿಂಗ್ ಹೋಗೋದಕ್ಕೆ ರೆಡಿಯಾಗಿದೆ . ಈ ಸಿನಿಮಾದ ವಿಶೇಷತೆ ಏನು ಅಂದ್ರೆ ಸಿನಿಮಾದ 80%ರಷ್ಟು ಭಾಗ ಮನೀಶ್ ಬಿಟ್ರೆ ಬೇರೆ ಯಾವ ನಟರು ಇರೋದಿಲ್ಲ . ಇದು ಕನ್ನಡದಲ್ಲಿ ಹೊಸ ಪ್ರಯತ್ನ ಅಂತ ಹೇಳಬಹುದು .
ಒಟ್ಟಿನಲ್ಲಿ ನಾಲ್ಕು ವರ್ಷಗಳಿಂದ ಬಿಗ್ ಸ್ಕ್ರೀನ್ ಮೇಲೆ ಕಾಣಿಸ್ಕೊಳ್ಳದ ಮನೀಶ್ ಅವರು ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ತಮ್ಮ ಅಭಿಮಾನಿಗಳನ್ನ ರಂಜಿಸಲು ಮತ್ತೆ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡ್ತಿದ್ದಾರೆ . ನಾನಿ ಸಿನಿಮಾದ ತರಹ ಈ ಸಿನಿಮಾಗಳು ಕೂಡ ಬಿಗ್ ಸಕ್ಸಸ್ ಕಾಣಲಿ ಅನ್ನೋದು ನಮ್ಮ ಆಶಯ. 

-ಮನೋಜ್ ವಿಜಯೀ೦ದ್ರ, ಫಿಲಂ ಬ್ಯೂರೋ 

LEAVE A REPLY

Please enter your comment!
Please enter your name here

- Advertisment -

Most Popular

‘ನಾನೇ ಸಭಾಪತಿ ಎಂದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ’

ಹುಬ್ಬಳ್ಳಿ: ಜೆಡಿಎಸ್ ನಿಂದ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪಸಭಾಪತಿಗೆ ಸ್ಪರ್ದೆ ಮಾಡಿದ್ರೆ ನಾನೇ ಸಭಾಪತಿ ಆಗುವೆ ಎಂದು ವಿಧಾನ ಪರಿಷತ್  ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

ಕೆಎಲ್ ಇ ಸಂಸ್ಥೆಗೆ ನೀಡಿದ ಭೂಮಿ ಮರಳಿ ಪಡೆಯುಲ್ಲ: ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ: ಮೂರು ಸಾವಿರಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದರು. ನಗರದಲ್ಲಿಂದು ಮಾತನಾಡಿದ ಅವರು, ನಾನು ಮಠದ...

ಪಂಜರದ ಗಿಣಿಗೆ ಇಂದು ಬಿಡುಗಡೆ ಭಾಗ್ಯ..!

ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಅರೆಸ್ಟ್ ಆಗಿದ್ದರು, ಆದರೆ ಬೆಲ್ ಸಿಕ್ಕೂ ನಾಲ್ಕು ದಿನ ಆದರೂ ಇಂದು ಸಂಜೆ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂಜೆ ಬಿಡುಗಡೆಯಾಗಲಿದ್ದಾರೆ. ನಟಿ...

ಯಾವ ಸರ್ಕಾರವೂ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡಲ್ಲ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೃಷಿ ಕಾಯ್ದೆ ಪ್ರಯೋಗ ಆಗಲಿ. ಒಂದೆರೆಡು ವರ್ಷ ಪ್ರಯೋಗ ಆಗಲಿ. ಆಗ ರೈತರಿಗೆ ತೊಂದರೆಯಾದರೆ ವಾಪಸ್ ಪಡೆಯೋಕೆ ತಯರಾಗುತ್ತಾರೆ. ಯಾವ ಸರ್ಕಾವೂ ರೈತರಿಗೆ ತೊಂದರೆ ನೀಡುವ ಕೆಲಸ ಮಾಡಲ್ಲ ಎಂದು ಬೃಹತ್ ಕೈಗಾರಿಕೆ...

Recent Comments