ಸ್ಯಾಂಡಲ್ ವುಡ್ ನ ಚಂದದ ಜೋಡಿ ಯಶ್ – ರಾಧಿಕಾ ಪಂಡಿತ್ ತಮ್ಮ ಮುದ್ದಾದ ಮಗನಿಗೆ ಬ್ಯೂಟಿಫುಲ್ ಹೆಸರಿಟ್ಟಿದ್ದಾರೆ.
ಯಶ್ - ರಾಧಿಕಾ ಪಂಡಿತ್ ಮಗನ ನಾಮಕರಣ ನೆರವೇರಿದ್ದು, ಯಥರ್ವ್ ಯಶ್ ಎಂದು ಹೆಸರಿಡಲಾಗಿದೆ. ರಾಧಿಕ ಪಂಡಿತ್ ಮಗನಿಗೆ ನಾಮಕರಣ ಮಾಡಿರುವ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಮೂಲಕ ಮಗನ ಮುದ್ದಾದ ಹೆಸರನ್ನು ರಿವೀಲ್ ಮಾಡಿದ್ದಾರೆ. ಈ ಹಿಂದೆ ಯಶ್ ಮಗಳಿಗೆ ಯಾವ ಹೆಸರಿಡಲಾಗಿತ್ತದೆ ಎಂಬ ಚರ್ಚೆ ನಡೆದಂತೆಯೇ ಮಗನ ಹೆಸರಿನ ವಿಚಾರದಲ್ಲೂ ಚರ್ಚೆ ನಡೆದಿತ್ತು. ಯಶ್ – ರಾಧಿಕ ಪಂಡಿತ್ ಮಗಳಿಗೆ ಯಶಿಕಾ ಅಂತ ನಾಮಕರಣ ಮಾಡ್ತಾರೆ ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸಿದ್ದರು. ಆದರೆ ಐರಾ ಎಂಬ ಹೆಸರನ್ನಿಡಲಾಗಿತ್ತು.
ಅಂತೆಯೇ ಯಶ್ – ರಾಧಿಕಾ ಪಂಡಿತ್ ಮಗನಿಗೆ ಆಯುಷ್ ಅಥವಾ ಯಧಿಶ್ ಎಂದು ನಾಮಕರಣ ಮಾಡಲಾಗುತ್ತದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮಾತಾಡಿಕೊಂಡಿದ್ರು. ಆದರೆ ಯಾರೂ ಊಹಿಸಿರದ ಹೆಸರನ್ನು ಯಶ್ – ರಾಧಿಕಾ ಇಟ್ಟಿದ್ದಾರೆ. ಮುದ್ದಿನ ತಮ್ಮನ ಹೆಸರನ್ನು ಐರಾ ಕರೆಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೀಗ ಸಖತ್ ಸದ್ದು ಮಾಡ್ತಿದೆ.