ಕಲಬುರಗಿ: ಕಾಂಗ್ರೆಸ್ ಪಕ್ಷ ಅಧಿಕಾರವಿಲ್ಲದಿದ್ದಾಗ ಇಲ್ಲಸಲ್ಲದಗೊಂದಲ ಸೃಷ್ಟಿ ಮಾಡಿ ಸುಖ ಅನುಭವಿಸುವಂತಹ ನೀಚ ರಾಜಕಾರಣ ಮಾಡೋಕೆ ಮುಂದಾಗಿದೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಟೀಕೆ ಮಾಡಿದ್ದಾರೆ.
ಕಲಬುರಗಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಕಟೀಲ್, ಕಾಂಗ್ರೆಸ್ ಪಕ್ಷ ವೃದ್ದಾಶ್ರಮ ಆಗ್ತಿದೆ, ರಾಷ್ಟ್ರೀಯ ಅಧ್ಯಕ್ಷರ ನೇಮಕ ಸಹ ಮಾಡೊಕೆ ಆಗ್ತಿಲ್ಲ ಅಂತಾ ವ್ಯಂಗ್ಯವಾಡಿದರು. ಮೊದಲು ಅಧ್ಯಕ್ಷ ಸ್ಥಾನದ ಬಗ್ಗೆ ಗೊಂದಲ ನಿವಾರಣೆ ಮಾಡಿಕೊಳ್ಳಲಿ ಆ ಮೇಲೆ ಬಿಜೆಪಿ ಬಗ್ಗೆ ಮಾತನಾಡಲಿ ಅಂತಾ ತಿರುಗೇಟು ನೀಡಿದರು. ಸಿಎಂ ಪುತ್ರ ವಿಜಯೇಂದ್ರ ಐದು ಸಾವಿರ ಕೋಟಿ ರೂಪಾಯಿ ಹಣ ಮಾಡಿದ್ದಾರೆ ಅಂತಾ ಕಾಂಗ್ರೆಸ್ ಆರೋಪ ಮಾಡಿದ್ದು, ಹಾದಿಯಲ್ಲಿ ಹೋಗುವರು ಇಂತಹ ಹೇಳಿಕೆ ನೀಡ್ತಾರೆ ಅಂತಾ ನಾವು ಯೋಚನೆ ಸಹ ಮಾಡೋದಕ್ಕೆ ಆಗಲ್ಲ ಹೇಳಿದರು. ಕೊವಿಡ್ ಸಂದರ್ಭದಲ್ಲಿ ಸಿಎಂ ಬಿಎಸ್ವೈ ಹಣ ಕೊಳ್ಳೆ ಹೊಡೆದಿದ್ದಾರೆ ಅಂತಾ ಆರೋಪ ಮಾಡಿದ್ದಕ್ಕೆ ಸಿಎಂ ಸರಿಯಾದ ಉತ್ತರ ಕೊಟ್ಟಿದಕ್ಕೆ ಕಾಂಗ್ರೆಸ್ ಪಲಾಯನವಾದಿ ನೀತಿ ಅನುಸರಿಸಿತ್ತು. ಮುಖ್ಯಮಂತ್ರಿ ಬಿಎಸ್ವೈ ಸಮರ್ಥ ನಾಯಕರಾಗಿದ್ದು, ಈ ರಾಜ್ಯವನ್ನ ಮುನ್ನಡೆಸುತ್ತಿದ್ದಾರೆ. ಯಡಿಯೂರಪ್ಪರಂತಹ ನಾಯಕರು ಕಾಂಗ್ರೆಸ್ ಪಕ್ಷದಲ್ಲಿಲ್ಲ ಅಂತಾ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯ ಐದು ವರ್ಷ ಆಡಳಿತ ಕೊಟ್ಟು ಏನು ಮಾಡಿದ್ರು? ಅರ್ಕಾವತಿ ಹಗರಣ ಎಲ್ಲಿ ಹೋಯಿತು? ಇವೆಲ್ಲ ಹಗರಣಗಳು ಮುಂದೆ ಹೊರಬರುತ್ತವೆ ಅಂತಾ ಎಚ್ಚರಿಕೆ ನೀಡಿದ್ರು.
-ಅನಿಲ್ಸ್ವಾಮಿ